Listen

Description

A Kannada Lesson - ಕನ್ನಡ ಪದ್ಯ ಪಾಠ

Like it? ...  Subscribe and Share!

Watch it ... at https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali

ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.      ಸ್ತೋಕ  ಅಂದರೆ ಕಣ , ಹನಿ.  ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ.  ಇದೊಂದು ಕವಿಸಮಯ.  ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:  

ಮೊದಲನೆಯ ಚೆನ್ನುಡಿ:    ಗೆಳತಿ ಚಾತಕಿ - ರೇ ರೇ ಚಾತಕ  

ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ,

        ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು:

 ಗಗನದಲಿ ಹಾರುವವು ಮೋಡಗಳು ಬಹಳ,

        ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ;

  ಮಳೆಗರೆದು ಇಳೆಯನ್ನು ತೋಯಿಸಲು ಕೆಲವು,

     ನಗೆ ಮಿಂಚು ಸೂಸಿ ಬರಿ ಗುಡುಗುವವು  ಹಲವು :

  ಕಂಡಕಂಡವರಿಗೆರಗುತ್ತ, ನೀ ಗೆಳತಿ,

ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು 

ಸಂಸ್ಕೃತ ಮೂಲ:  ಭರ್ತೃಹರಿ, ನೀತಿಶತಕ-೪೯   

ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ. 

 ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;

ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;

ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.

         -----------------

ಎರಡನೆಯ ಚೆನ್ನುಡಿ:      ಹಕ್ಕಿ ಚಾತಕಕೆ - ಏಕ ಏವ ಖಗ

ಹಕ್ಕಿ ಚಾತಕಕೆ ಬಲು ಹೆಮ್ಮೆ,

   ಮಳೆಯ ನೀರೇ ಬೇಕು ಸೊಗಕೆ;

ಬೇಡುವುದು ಘನರಾಜನನ್ನೆ:

   ಕೀಳ್ಜನಕೆ ಬಾಯ್ತೆರೆಯಲೇಕೆ?

ಸಂಸ್ಕೃತ ಮೂಲ:    ಶ್ರೀಧರದಾಸನ ಸದುಕ್ತಿ ಕರ್ಣಾಮೃತ

ಏಕ ಏವ ಖಗೋ ಮಾನೀ

     ಸುಖಂ ಜೀವತಿ ಚಾತಕಃ; 

ಅರ್ಥಿತ್ವಂ  ಯಾತಿ ಶಕ್ತಸ್ಯ

     ನ ನೀಚಮುಪಸರ್ಪತಿ. 

      ------------------

ಮೂರನೆಯ ಚೆನ್ನುಡಿ:      ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

ಮೂರು ಯಾ ನಾಲ್ಕು ಹನಿ ನೀರು ನೀಡೆಂದು

    ಚಾತಕವು ಬಾಯ್ದೆರೆದು ಬೇಡಲಾ ಮುಗಿಲು

ಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು

    ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!

ಸಂಸ್ಕೃತ ಮೂಲ:  ಪೂರ್ವಜಾತಕಾಷ್ಟಕಂ 

ಚಾತಕಸ್ತ್ರಿಚತುರಾನ್ ಪಯಃ ಕಣಾನ್

     ಯಾಚತೇ ಜಲಧರಂ ಪಿಪಾಸಯಾ; 

ಸೋಽಪಿ  ಪೂರಯತಿ ವಿಶ್ವಮಂಭಸಾ :

    ಹಂತ ಹಂತ ಮಹತಾಮುದಾರತಾ! 

     ---------------

0:00 ಪರಿಚಯ 

1:18 ಗೆಳತಿ ಚಾತಕಿ - ರೇ ರೇ ಚಾತಕ 

3:25 ಹಕ್ಕಿ ಚಾತಕಕೆ - ಏಕ ಏವ ಖಗ 

4:21 ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್