Listen

Description

👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠

📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletterಹೆಸರಿಗಾಗಿ!ನಿಜ ಜೀವನದ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆಬರೆಹ * ಓದು: ವಿಶ್ವೇಶ್ವರ ದೀಕ್ಷಿತಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ. ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ. ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ. ಹೆಸರೊಂದು ಇಡಿ ಜೀವನದ ಗತಿಯನ್ನೆ ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.ಯೋಜನೆಗಳು[ಇರಲಿ!] ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ: ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು, ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.ಯೋಜನೆ, ಬರಿ ಯೋಜನೆಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು. ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ.ಐಡಿಯ ನಂಬರ್‌ ಒನ್[ಅಹಾ!] ಒಂದು ಐಡಿಯ ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?" ಅವಳ ಐಡಿಯ ಬೇರೆಯೆ ಆಗಿತ್ತು. "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರುಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು.ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ.ಗಾಂಧಾರಿಯ ಗುಟ್ಟುನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು. ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ. ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ! ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ. ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ. ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ್ಟಿಕೊಂಡ ಗರತಿ ಗಾಂಧಾರಿಗೆ ಎಂತಹ ಶಿಕ್ಷೆ!ಗಾಂಧಾರಿ ಧೃತರಾಷ್ಟ್ರರು ಯಾವ ಕುರು ... --- ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kanadakali.com/experience/hesarigagi.html ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಡಿಸೆಂಬರ್‌ ೩, ೨೦೨೫