👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಕನ್ನಡವೆಂಬುದು ಮಂತ್ರ ಕಣಾ!ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ.ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼ ಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ.(ಕನ್ನಡ ಉಚ್ಚಾರ ಮಂತ್ರದಷ್ಟು ಸೂಕ್ಷ್ಮವೇ?)ಹುಚ್ಚರಣೆ ದಾಸರನ್ನು ಆಡಿ ಕೊಲ್ಲಿರೋ!ಮತ್ತುಕನ್ನಡದ ಏಳು ಅಪಸ್ವರಗಳು-- ವಿಶ್ವೇಶ್ವರ ದೀಕ್ಷಿತಗಾಯನ: ಸ್ಫೂರ್ತಿ ಉಗ್ರಪ್ಪಫೆಬ್ರುವರಿ ೦೭, ೨೦೨೧ ರಂದು "ವಾಕ್ಪಟುಗಳು" ಆನ್‌ಲೈನ್ ಗುಂಪಿನಲ್ಲಿ ನೀಡಿದ ಭಾಷಣ( https://www.facebook.com/groups/vakpatugalu/permalink/10159612099913118/ )ಅನಾವಶ್ಯಕ ವರ್ಣ ಪಲ್ಲಟ, ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ ಅಗುವ ಅಪಾರ್ಥ, ಅನರ್ಥ, ಆಭಾಸಗಳಿಗೆ ಪದಗಳ ತಿಳಿವಳಿಕೆ ಇಲ್ಲದಿರುವುದೆ ಮುಖ್ಯ ಕಾರಣRead Complete article: https://kannadakali.com/article/culture/huchcharane.html09:55 ಸಪ್ತ ಅಪಸ್ವರಗಳು12:45 ೧ ಪಾಯಸದಲ್ಲಿ ನೊಣ : ನ ↔ ಣ12:46 ದಡಬಡ ತಟಪಟ: ಡ ↔ ದ17:12 ೨ ಲಳಯೋರಭೇದ : ಳ ↔ ಲ19:45 ೩ ಕೂಡಿಸಿ ಕೆಟ್ಟ : ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ23:44 ೪ ಎಲ್ಲರೂ ಭಂಡರೆ : ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸಿ ಇದ್ದಲ್ಲಿ ಬಿಡುವುದು28:13 ೫ ಹಾರುವ ಹಕಾರ : ವರ್ಣ ಪಲ್ಲಟ 31:44 ೬ ಹಗರಣ : ವರ್ಣ ಆದೇಶ, 33:00 ೭ ಆಸನ-ಹಾಸನ : ವರ್ಣ ಲೋಪ ಮತ್ತು ವರ್ಣ ಆಗಮ35:06 ದಾಸರ ಪದಗಳನ್ನು ಹೇಗೆ ಹಾಡಬೇಕು