Listen

Description

👍 Like it? ...... ⁠⁠⁠⁠Subscribe and Share! ⁠⁠⁠⁠

👁️ ⁠⁠⁠⁠Watch it⁠⁠⁠⁠  🕮 ⁠⁠⁠⁠Read it ⁠⁠⁠⁠  👂 ⁠⁠⁠⁠Listen it⁠⁠⁠⁠ 

📧 ⁠⁠⁠⁠Subscribe to our newsletter⁠⁠⁠⁠

⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುಮಿಥ್ಯೆ ೧೧. (ಬೋನಸ್!) ಕನ್ನಡಿಗರು ಅಭಿಮಾನಶೂನ್ಯರುತಪ್ಪು. ಕನ್ನಡಿಗರು ಅನೇಕ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಬನವಾಸಿಯ ಕದಂಬರು ಕೋಲಾರದ ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ರಾಜ್ಯ ಇವೆಲ್ಲ ಗೊತ್ತಿರುವ ವಿಷಯಗಳು. ಇವರು ಇಂದಿನ ಕರ್ನಾಟಕದ ಒಳಗೆ ಮತ್ತು ಹೊರಗೆ ಹಬ್ಬಿ ಕನ್ನಡದಲ್ಲಿ ಆಳಿದರು. ಇಂದು, ಕನ್ನಡಿಗರು ಭಾರತದ ತುಂಬ ಹರಡಿಕೊಂಡಿದ್ದಾರೆ. ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಾರೂ ಕನ್ನಡವನ್ನು ಮರೆತಿಲ್ಲ.ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕರು ಪರಂಪರಾಗತವಾಗಿ ಕನ್ನಡಿಗರು. ಕನ್ನಡ ಬಲ್ಲವರು. ದಿಲ್ಲಿ ಮುಂಬಯಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಬೆಳಿಗ್ಗೆ ಹೊರಗೆ ಹಣಿಕೆ ಹಾಕಿದರೆ ಮೂಲೆ ಮೂಲೆಗಳ ಹೊಟೇಲುಗಳಲ್ಲಿ ಕನ್ನಡದ್ದೆ ಸುಪ್ರಭಾತ! ಎಲ್ಲ ಊರುಗಳಲ್ಲೂ ಕ್ರಿಯಾಶೀಲ ಕನ್ನಡ ಸಂಘಗಳು ಇವೆ. ಕನ್ನಡ ವರ್ತಮಾನ ಪತ್ರಗಳು ಪ್ರಕಟವಾಗುತ್ತವೆ. ಕಾಯ್ಕಿಣಿ ಮತ್ತು ಜಿ.ವಿ. ಕುಲಕರ್ಣಿ "ಜೀವಿ" ಅಂಥ ಸತ್ವಯುತ ಸಾಹಿತಿಗಳು ಇದ್ದಾರೆ. ಮೇಲಾಗಿ, ದೂರದ ಹಳ್ಳಿಗಳಲ್ಲಿ ಇರುವ ಕನ್ನಡಿಗರು ಮನೆಯಲ್ಲಿ ಕನ್ನಡವನ್ನೆ ಮಾತಾಡುತ್ತಾರೆ; ಇದು ನಾನು ಗಮನಿಸಿದ ಸಂಗತಿ.ಅಮೆರಿಕೆಯಲ್ಲಿ, ಅದೂ ನಮ್ಮ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ(KCA) ಹುಟ್ಟಿದ ಕನ್ನಡ ಕಲಿಯ ಕಿಡಿ ಇಂದು ಜಗತ್ತಿನ ಎಲ್ಲೆಡೆ ಹಬ್ಬಿಕೊಂಡು, ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ.ಬೇರೆ ಭಾಷೆಗಳನ್ನು ಪಳಗಿಸಿಕೊಳ್ಳುವ ಮತ್ತು ಬೇರೆ ಭಾಷಿಕರನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. ಇದಕ್ಕೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆ ಮಾಸ್ತಿ ಅಂಥ ಸಾಹಿತಿಗಳನ್ನು, ಬೇರೆ ಭಾಷೆಗಳಿಂದ ಕನ್ನಡಕ್ಕೆ ಒಗ್ಗಿಕೊಂಡ ಪದಗಳನ್ನು, ಅಲ್ಲದೆ, ಧಾರವಾಡ ಪೇಢೆಯನ್ನೂ ಉದಾಹರಿಸಬಹುದು.ಒಟ್ಟಿನಲ್ಲಿ, ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ಇರದೆ ಇವೆಲ್ಲ ಆಗಲು ಸಾಧ್ಯವಿಲ್ಲ. ಕನ್ನಡಿಗರು ಅಭಿಮಾನಿಗಳು, ದುರಭಿಮಾನಿಗಳಲ್ಲ, ಅಭಿಮಾನಶೂನ್ಯರಂತೂ ಖಂಡಿತ ಅಲ್ಲ.ಇನ್ನೇಕೆ ಸಂಕೋಚ? ಕನ್ನಡ ಕಲಿಯೋಣ; ಕನ್ನಡದಲ್ಲಿ ಮಾತಾಡೋಣ; ನಿತ್ಯ ಕನ್ನಡಿಗರಾಗೋಣ!ರಾಜ್ಯೋತ್ಸವದ ಶುಭಾಶಯಗಳು!ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ನವಂಬರ ೧, ೨೦೨೩