👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ? ಹೀಗೆ ಪ್ರಶ್ನೆಗಳನ್ನು ಕೇಳುತ್ತ ಹೋಗಬಹದು.Hello ಶಬ್ದದ ಹುಟ್ಟುಹಲೋ ಯಾವುದೋ ಲ್ಯಾಟಿನ್, ಗ್ರೀಕ್, ಅಥವಾ ಜರ್ಮನ್ ಮೂಲದ ಪದ ಇರಬೇಕು ಅಂದುಕೊಳ್ಳುವುದು ಸಹಜ. ಹೆಕ್ಕಿ ನೋಡಿದರೆ, ಇದು ಪ್ರಾಚೀನ ಶಬ್ದವೇನಲ್ಲ. ಟ್ರಿನ್ ಟ್ರಿನ್ ಎಂದು ಕರೆ ಗಂಟೆ ಹೊಡೆದುಕೊಳ್ಳುತ್ತಿರುವ ದೂರವಾಣಿಯನ್ನು ಎತ್ತಿಕೊಳ್ಳಲಾಗಿದೆ ಎಂದು ಸೂಚಿಸಲು ಆ ಕಡೆ ಫೋನ್ ಎತ್ತಿಕೊಂಡವರು ಹೇಳುವುದಕ್ಕೆ ಈ ಪದ ಹುಟ್ಟಿದ್ದು. ಟೆಲೆಫೋನ್ ಕಂಡು ಹಿಡಿದ ಅಲೆಕ್ಸ್ಯಾಂಡರ್ ಗ್ರಾಹಮ್ ಬೆಲ್ ಇದಕ್ಕೆ ಕಾರಣ ಎಂದುಕೊಳ್ಳುವುದು ಸಹಜ. ಆಶ್ಚರ್ಯವೆಂದರೆ ಇದನ್ನು ಪ್ರಚಲಿತಗೊಳಿಸಿದವ ಥಾಮಸ್ ಆಲ್ವಾ ಎಡಿಸನ್.ದೇಶದ ತುಂಬ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸುವ ಹೊಣೆಯನ್ನು ಅಮೆರಿಕ ಸರಕಾರ ಎಡಿಸನ್‌ಗೆ ಕೊಟ್ಟಿತ್ತು. ತನ್ನ ಆ ಪ್ರಭಾವವನ್ನು ಉಪಯೋಗಿಸಿ ಎಡಿಸನ್ ಹಲೋ ಬಳಕೆಯನ್ನು ಕಡ್ಡಾಯಗೊಳಿಸಿದನು. ದೂರವಾಣಿ ಹೊತ್ತಿಗೆಗಳಲ್ಲಿ ಹಲೋ ಬಳಕೆಯನ್ನು ನಿಗದಿಸಿದನು.ಅಪರೇಟರುಗಳು ಹಲೋ ಅನ್ನುವುದು ಸಾಮಾನ್ಯವಾಯಿತು. ಅಂತೆಯೆ, ಮುಂಚಿನ ದೂರವಾಣಿ ಆಪರೇಟರುಗಳು "ಹಲೋ ಹುಡುಗಿಯರು" (hello girls)ಎಂದು ಹೆಸರಾಗಿದ್ದರು.೧೮೮೦ರಲ್ಲಿ ನಡೆದ ಟೆಲಿಫ಼ೋನ್ ಕಂಪನಿಗಳ ಮೊದಲ ಸಮಾವೇಶದಲ್ಲಿ ಇನ್ನೊಂದು ಪರಂಪರೆ ಹುಟ್ಟಿಕೊಂಡಿತು. ಪ್ರತಿನಿಧಿಗಳು ಎದೆಗೆ ಅಂಟಿಸಿಕೊಂಡ ಹೆಸರು ಚೀಟಿಗಳ ಮೇಲೆ "ಹಲೋ" ಎನ್ನುವ ಶಬ್ದ ದೊಡ್ಡದಾಗಿ ಇತ್ತು. ಈಗ ಯಾವ ಸಮ್ಮೇಳನ ಸಮಾವೇಶಗಳಲ್ಲು ಕಂಡುಬರುವುದು ಪರಿಚಿತ "ಹಲೋ, ನನ್ನ ಹೆಸರು ..."ದೂರವಾಣಿಯಲ್ಲಿ ಅಲ್ಲದೆ, ಎದುರುಗೊಂಡಾಗ ಕೂಡ, ಕೈ ಕುಲುಕುತ್ತ, ಹಲೋ ಎನ್ನಬಹುದು.ಹಲೋಗೆ ಸಮಾನ ಕನ್ನಡ ಪದ?ಇಂತಹ ಬಹೂಪಯೋಗಿ ಹಲೋಗೆ ಸಮಾನ ಶಬ್ದ ಬೇರೆ ಯಾವ ಭಾಷೆಯಲ್ಲಾದರು ಉಂಟೆ? ಸಂಸ್ಕೃತವೆ ಇದಕ್ಕೆ ಉತ್ತರ. ಅದು "ನಮಃ."ನಮಗೆ ಪರಿಚಿತವಿರುವ ’ನಮಸ್ಕಾರ’, ’ನಮಸ್ತೇ’ ಕೂಡ ’ನಮಃ’ದಿಂದೆ ಬಂದವುಗಳು. ಆದರೆ, ʼನಮಃʼ ದ ವಿಸರ್ಗ, ಕನ್ನಡಕ್ಕೆ ಅಷ್ಟೇ ಅಲ್ಲ, ಯಾವ ಇತರ ಭಾರತೀಯ ಭಾಷೆಗೂ ಒಗ್ಗುವುದಿಲ್ಲ. ಅದಕ್ಕೇ ʼತೇʼ, ʼಕಾರʼ ಗಳನ್ನು ಸೇರಿಸಿಕೊಂಡು ನಮಸ್ತೇ ನಮಸ್ಕಾರ ಅಂತ ಮಾಡಿಕೊಂಡಿರುವುದು.ಸಂಸ್ಕೃತದ ’ನಮಃ’ ಶಬ್ದದ ಒಂದು ರೂಪವಾದ ’ನಮೋ’, ಸಂಧಿ ಸಮಾಸಗಳ ಗೊಡವೆ ಇಲ್ಲದೆ, ಎಲ್ಲಡೆ ಬಳಸಬಹುದಾದ ಸೌಮ್ಯ ಪದ. ʼನಮʼ ದ ಕೊನೆಗೆ ಸೇರಿಕೊಂಡ ದೀರ್ಘ ಸ್ವರ ʼಓʼ (ನಮ+ಓ) ಸಂಬೋಧನಾತ್ಮಕ ನಮ್ರತೆಯ ಸೂಚಕ ಕೂಡ. ನಮೋ - a small word with a big heart - ಚಿಕ್ಕ, ಚೊಕ್ಕ, ಬಹೂಪಯೋಗಿ ಶಬ್ದ. ದೂರವಾಣಿ ಕರೆಯನ್ನು ಉತ್ತರಿಸಬಹುದು, ಎದುರುಗೊಂಡಾಗಲೂ ಹೇಳಬಹುದು. ಸ್ವಲ್ಪ ಎಳೆದು ನಮೋಽಽ ಎಂದರೆ ಸಾಕು, ಎಲ್ಲ ಸದ್ಭಾವಗಳೂ ಹೊಮ್ಮುವವು. ಹೀಗೆ ನಮೋ ಕೃತಕವಲ್ಲ - ಯಾರೂ ಅದನ್ನು ಹುಟ್ಟಿಸಲಿಲ್ಲ. ಇದು ಪುರಾತನ ದೇವವಾಣಿ.ನಮೋ ಎಂದು ಕಾಗದವನ್ನು ಪ್ರಾರಂಭಿಸಬಹುದು. ಮೇಲಾಗಿ, ಪತ್ರ ಮುಗಿಸಲೂ ನಮೋ ಹೇಳಬಹುದು.ಹಲೋ vs ನಮೋಸಂದರ್ಭ : ಬರವಣಿಗೆ ಅಥವಾ ಮಾತುಕತೆ ಆರಂಭದಲ್ಲಿ ಮಾತ್ರ ಹಲೋ ಬಳಸಬಹುದು ; ಆದರೆ "ನಮೋ" ಎಲ್ಲ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ—ಆರಂಭ, ಅಂತ್ಯ, ವಿದಾಯ, ಸ್ವಾಗತ.ಆರೋಗ್ಯ : ಆರೋಗ್ಯದ ನೋಟದಿಂದಲೂ ʼನಮೋʼದ್ದೆ ಮೇಲುಗೈ! ಅಂದರೆ, ಕೈಜೋಡಿಸಿ ʼನಮೋʼ ಎನ್ನುತ್ತ ದೂರದಿಂದಲೆ ನಮಸ್ಕಾರ ಮಾಡಿದರಾಯ್ತು. ಹೆಲೋ ಹೇಳುತ್ತ ಬೇರೊಬ್ಬರನ್ನು ಮುಟ್ಟಿ ಕೈ ಕುಲುಕುವ ಅವಶ್ಯಕತೆ ಇಲ್ಲ. ವಿಶೇಷವಾಗಿ, ೨೦೨೦ರ ಕೋವಿಡ್ ವೈರಾಣು ಪ್ಯಾಂಡೆಮಿಕ್ ಸಮಯದಲ್ಲಿ ಇಂಥ ʼನಮೋ-ನಮಸ್ಕಾರʼ ಸಂಪ್ರದಾಯವನ್ನು ಅಳವಡಿಸಿಕೊಂಡಾಗ, ಮುಜುಗರ ಅಲ್ಲದೆ ಆಪತ್ತಿನಿಂದ ಜನರನ್ನು ಉಳಿಸಿದ್ದು ನಿಜ.ಭಾಷೆ : ಹಲೋ ವಿದೇಶಿ – ನಮೋ ಸ್ವದೇಶಿ. ಮೇಲಾಗಿ, ನಮೋ ಸಾಂಸ್ಕೃತಿಕ ಗುರುತ್ವ ಉಳ್ಳ, ಶುದ್ಧ ಭಾರತೀಯತೆಯ ಸಂಕೇತನೀವು ವಿಚಾರಿಸುತ್ತಿರುವುದು ಸರಿ. ಎದುರುಗೊಂಡಾಗ ಮತ್ತು ಸೇರುವಾಗ, ಕಾಗದ-ಪತ್ರ ಮತ್ತು ಇ-ಮೆಲ್ ಬರೆಯುವಾಗ ಮಾತ್ರವಲ್ಲ, ಬೀಳ್ಕೊಡುವಾಗ ಮತ್ತು ಅಗಲುವಾಗ ಕೂಡ ನಮೋ ಎನ್ನಬಹುದು. ವಿದಾಯ ಹೇಳಲು ಹಲೋ ಎನ್ನಬಹುದೆ? ಪತ್ರದ ಮುಕ್ತಾಯದಲ್ಲಿ ಹಲೋ ಬರೆಯಬಹುದೆ? ಸಾಧ್ಯವಿಲ್ಲ!ಹಲೋ ಕೂಡ ಕನ್ನಡ!ಎಡಿಸನ್‌ಗೆ ಸಂಸ್ಕೃತ ಭಾಷೆ ಪರಿಚಿತವಿತ್ತೇನೊ ಗೊತ್ತಿಲ್ಲ. ಹಲೋ ಹುಟ್ಟಲು ಸಂಸ್ಕೃತದ ’ಹಂಹೋ’, ’ಅಹೋ’, ಅಥವ ಕನ್ನಡದ ʼಎಲವೋʼ, ’ಎಲೋ’, ʼಲೋʼಗಳು ಅಪರೋಕ್ಷವಾಗಿ ಪ್ರಭಾವಿಸಿರಬಹುದೆ?! ದೂರವಾಣಿ ಕರೆ ಉತ್ತರಿಸಿದಾಗ, ಅಚ್ಚ ಕನ್ನಡಿಗನೊಬ್ಬʼಹಹ್ಹ್ʼ ಎಂದು ಗಂಟಲು ಸರಿಪಡಿಸುತ್ತ ʼ(ಎ)ಲೋʼ ಎನ್ನುವ ಚಿತ್ರ ಮೂಡಿ ಸಹಜವಾಗಿ ಕೇಳಿಸುವ ಪದ ʼಹಲೋʼ(ಹೆಲೊ). ಹಾಗೆಂದು, ನಿಜ ಹುಟ್ಟು ಏನೇ ಇರಲಿ, ಹಲೋ ಕೂಡ ಕನ್ನಡ ಪದ ಅನಿಸಿದರೆ ತಪ್ಪಲ್ಲ!ಆದರೂ, ನಮ್ಮ ನೆಲದ "ನಮೋ" ಶಬ್ದವು ವಿನಯ, ಆತ್ಮೀಯತೆ, ಮರ್ಯಾದೆ, ಮತ್ತು ಅತಿಥಿ ಸೌಹಾರ್ದಗಳ ಪ್ರತೀಕ. ಆದ್ದರಿಂದ ’ಹಲೋ’ ಬಳಸುವಲ್ಲೆಲ್ಲ ’ನಮೋ’ ಎನ್ನುವುದು ನಮ್ಮ ಭಾಷೆಗೆ, ಸಂಸ್ಕೃತಿಗೆ, ಹಾಗೂ ಸಂಸ್ಕಾರಕ್ಕೆ ಅತ್ಯಂತ ಔಚಿತ್ಯಪೂರ‍್ಣವಾದದ್ದು. ಕನ್ನಡ ತಾಯಿಯ ಮುಡಿಗೆ ಏರಿಸುವ ಗೌರವ ಪುಷ್ಪವೆ ನಮೋ.ಚಿಕ್ಕ ಪದ – ವಿಶಾಲ ಹೃದಯಸಂಸ್ಕೃತದ ನಮೋ ಎಲ್ಲ ಭಾರತೀಯ ಭಾಷೆಗಳಲ್ಲೂ ಹೊಕ್ಕಿದೆ. ವಿನಯ, ಗಾಂಭೀರ್ಯ, ಮರ್ಯಾದೆ, ಆದರ, ಸ್ವಾಗತ ಮುಂತಾದ ಭಾವಗಳನ್ನು ಆಳವಾಗಿ ಬಿಂಬಿಸುವ ವಿಶಾಲ ಹೃದಯದ ಈ ಚಿಕ್ಕ ಪದ ನಮ್ಮ ಸಂಸ್ಕೃತಿಯ ಪ್ರತೀಕ, ಭಾರತೀಯತೆಯ ಸಂಕೇತ. ಆದ್ದರಿಂದ ಹೆಲೋ-ಎಲೋ ಬಿಟ್ಟು ನಮೋ