ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ಭಾನುವಾರ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಮೂರ್ಖನಾದರೂ ಕೂಡ ಈಕೆಯ ಕೃಪೆಯಿಂದ ಬುದ್ಧಿವಂತನಾಗುತ್ತಾನೆ. ಸ್ಕಂದಮಾತಾ ಪರ್ವತಗಳಲ್ಲಿ ವಾಸಿಸುವ ಮೂಲಕ ಲೌಕಿಕ ಜೀವಿಗಳಲ್ಲಿ ಹೊಸ ಪ್ರಜ್ಞೆಯನ್ನು ಸೃಷ್ಟಿಸಿದಂತಹ ದೇವತೆ. ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಅವಳನ್ನು ಪೂಜಿಸುವ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಭಕ್ತನಿಗೆ ಮೋಕ್ಷ ಸಿಗುತ್ತದೆ. ಅದೇ ಸಮಯದಲ್ಲಿ, ಅವರನ್ನು ಪೂಜಿಸುವುದರಿಂದ ಸಂತಾನ ಭಾಗ್ಯವೂ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ ಐದನೇ ದಿನದ ಪೂಜೆಯ ವಿಧಾನ, ವ್ರತ ಕಥೆ, ಆರತಿ, ಮಂತ್ರ ಹೀಗಿದೆ