*
ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ.
ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ,-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ.ಈ ಕಾರ್ಯವಿಧಾನವು ವಾಸ್ತವಿಕ ಹಸಿರುಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ, ಲಂಬಗಮನದಿಂದ ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್ ಆವಿಷ್ಕರಿಸಿರು; ಜಾನ್ ಟಿಂಡಾಲ್ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು ಭೂಮಿಯ ಕೃಷ್ಣಕಾಯ ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು. ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು (AGW), "ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.