ಫೇಸ್ ಬುಕ್ಕಿನ ಮಾರ್ಕ್ ಜುಕರ್ ಬರ್ಗ್ ನಲವತ್ತು ಮೂರುವರೆ ಸಾವಿರ ಕೋಟಿ ರೂಪಾಯಿಗಳನ್ನ ಅಂಬಾನಿಯ ರಿಲಾಯನ್ಸ್ ಜಿಯೋನಲ್ಲಿ ಹೂಡಿರುವುದು ಅರಕಲಗೂಡಿನ ದಿನಸಿ ಅಂಗಡಿಯ ಮೇಲೆ ಯಾವ ಪರಿಣಾಮ ಬೀರಬಹುದು?
ಅಮೇಜಾನ್ ಕಂಪನಿ ಎಷ್ಟೋ ವರ್ಷಗಳಿಂದ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವ ದೂರು ಎಷ್ಟು ಮಟ್ಟಿಗೆ ಸತ್ಯ?
ಅಮೇರಿಕಾ, ಯುರೋಪಿನಲ್ಲಿ ಇರುವಂತೆ ಭಾರತದಲ್ಲಿ ರೆಗುಲೇಟರಿ ಸಿಸ್ಟಂ ಇದೆಯೇ?
ದೊಡ್ಡ ಕಂಪೆನಿ, ಯಶಸ್ವಿ ಉದ್ದಿಮೆ, ಶ್ರಮಿಕ ಉದ್ಯಮಿಗಳ ಕುರಿತು ಹೆಚ್ಚಿನ ಜನರಿಗೆ ಇರುವ ರೇಜಿಗೆ, ಸಿಟ್ಟಿಗೆ ಇರುವ ಕಾರಣಗಳೇನು? ಇವು ಪ್ರಜಾಪ್ರಭುತ್ವವೊಂದರಲ್ಲಿ ರಾಜಕಾರಣಿಗಳಿಗೆ, ಹೋರಾಟಗಾರರಿಗೆ, ಪಾಲಿಸಿ ಬರೆಯುವವರಿಗೆ ಹಾಗೂ ಪತ್ರಕರ್ತರಿಗೆ ಯಾವ ರೀತಿಯ ಇನ್ಸೆಂಟೀವ್ ಗಳನ್ನು ಸೃಷ್ಟಿಸುತ್ತೆ?
ಆಸ್ಟ್ರೇಲಿಯ, ಫ್ರಾನ್ಸಿನಲ್ಲಿ ಗೂಗಲ್ ವಿರುದ್ಧ ಸುದ್ದಿ ಮಾಧ್ಯಮ ಕಂಪೆನಿಗಳು ನಡೆಸುತ್ತಿರುವ ಹಣಾಹಣಿಗೂ ಐಪಿಎಲ್ ಗೂ ಎತ್ತಣಿಂದ ಸಂಬಂಧ?
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್ .
Recording date: 26 April 2020
Credits:
Music : Crescents by Ketsa Licensed under creative commons.
Icon made by Freepik from www.flaticon.com