Listen

Description

ನೂರು ಹಗ್ಗಗಳನ್ನ ಹಾವು ಅಂದುಕೊಂಡರೆ ಯಾವುದೇ ನಷ್ಟವಿಲ್ಲ ಆದರೆ ಒಂದು ಹಾವನ್ನು ಹಗ್ಗ ಎಂದು ಭಾವಿಸಿದರೆ ಅದು ಪ್ರಾಣಾಘಾತುಕವಾದೀತು ಎನ್ನುವ ಮನುಷ್ಯ ವಿಕಾಸದ ತಥ್ಯಕ್ಕೂ ಅರ್ನಬ್ ಗೋಸ್ವಾಮಿಯ ಬಫೆ ಮಾದರಿಯ ಪ್ಯಾನಲ್ ಚರ್ಚೆಗೂ ಏನು ಸಂಬಂಧ?

ಪ್ರತಿ ತಲೆಮಾರಿನ ಹಿರಿಯರು ತಮ್ಮ ಬಾಲ್ಯದ ಅಥವಾ ಯೌವನದ ದಿನಗಳು ಸ್ವರ್ಣಯುಗ, ಆ ಯುಗದ ಸಂಗೀತ, ಹಾಡುಗಳು, ಸಿನೆಮಾಗಳು, ಜೀವನ ಪದ್ಧತಿಯೇ ಶ್ರೇಷ್ಠ ಎಂದು ಭಾವಿಸುವುದರಲ್ಲಿ ಸತ್ಯ ಎಷ್ಟಿದೆ?

ಆಫೀಸಿನ ಮೀಟಿಂಗುಗಳಲ್ಲಿ, ಫೇಸ್ ಬುಕ್ಕಿನ ಚರ್ಚೆಗಳಲ್ಲಿ ಕೆಲವೊಮ್ಮೆ ದಡ್ದತನ ನಟಿಸುವುದು ನಿಜಕ್ಕೂ ಜಾಣತನ ಎಂದು ಸ್ಕಾಟ್ ಆಡಮ್ಸ್ ಹೇಳುವುದರ ಹಿಂದಿನ ತರ್ಕವೇನು?

ಸಾಮಾಜಿಕ ತಾಣಗಳಲ್ಲಿ ನಾವು ರಾಜಕೀಯ, ಸಾಮಾಜಿಕ ವಿಷಯಗಳನ್ನ ಚರ್ಚೆ ಮಾಡುವಾಗ ನಿಜಕ್ಕೂ ಸತ್ಯವನ್ನು ಅರಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವಾ ಅಥವಾ ನಾವು ಓದುವ ಪತ್ರಿಕೆ, ನೋಡುವ ಸುದ್ದಿ ಮಾಧ್ಯಮದಿಂದ ಅಂಟಿಸಿಕೊಂಡ ಅಭಿಪ್ರಾಯಗಳನ್ನು ಇನ್ನೊಬ್ಬರಿಗೆ ದಾಟಿಸುತ್ತೇವಾ?

ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ .

Recording date: 03 May 2020

Credits:

Music : Crescents by Ketsa Licensed under creative commons.

Icon made by Freepik from www.flaticon.com