ವ್ಯಾಸಂಗದಲ್ಲಿ ಮೆಕಾನಿಕಲ್ ಇಂಜಿಯರ್, ವೃತ್ತಿಯಲ್ಲಿ ವರ್ತಕರು, ಪ್ರವೃತ್ತಿಯಲ್ಲಿ ಇತಿಹಾಸ ಪ್ರಿಯರು, ಟಿಪ್ಪು ಸುಲ್ತಾನನ ಆಳ್ವಿಕೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ನಿತಿನ್ ಜಾರ್ಜ್ ಓಲಿಕಾರ ಈ ಸಂಚಿಕೆಯ ಅರಳಿಕಟ್ಟೆ ಪಾಡ್ ಕಾಸ್ಟಿನಲ್ಲಿ ನಮ್ಮೊಂದಿಗಿದ್ದಾರೆ.
ಮಾರ್ವಾಡಿ, ಚೆಟ್ಟಿಯಾರ್, ಮುಲ್ತಾನಿ, ಸಿಂಧಿ, ಶೆಟ್ಟಿ ಮುಂತಾದ ಜನಾಂಗಗಳು ಪ್ರಾಚೀನ ಭಾರತದಲ್ಲಿನ ಹಣಕಾಸು ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು ಹೇಗೆ? ಅವರ ಪ್ರಭಾವ ಎಷ್ಟರ ಮಟ್ಟಿಗೆ ಆವರಿಸಿತ್ತು?
ಹಣಕಾಸು, ಲೇವಾದೇವಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇವಲ ಕೆಲವು ಜಾತಿಯ ಜನರು ತೊಡಗಿಸಿಕೊಂಡಿದ್ದು ಭಾರತಕ್ಕೆ ವಿಶಿಷ್ಟವಾದ ವಿಚಾರವೇ ಅಥವಾ ಜಗತ್ತಿನ ಬೇರೆ ಪ್ರದೇಶಗಳಲ್ಲೂ ನಾವು ಈ ಬಗೆಯ ಪ್ರಭಾವವನ್ನು ಕಾಣಬಹುದೇ?