Listen

Description

ಹನ್ನೊಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ರಮ್ಯ ಭಾರದ್ವಾಜ್ ತಮ್ಮ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಶಾಲೆಯಿಂದ ತೆಗೆಸಿ ಮನೆಯಲ್ಲಿಯೇ ಬೆಳೆಸುತ್ತಿದ್ದಾರೆ. ಅವರ ಪತಿ ಗಂಗಾಧರ್ ಕೃಷ್ಣನ್ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಹೊಸ ಅನುಭವಗಳಿಗೆ ಒಡ್ಡುತ್ತಾರೆ. ಇದನ್ನು ಅವರು ಹೋಮ್ ಸ್ಕೂಲಿಂಗ್, ರೋಡ್ ಸ್ಕೂಲಿಂಗ್, ಅನ್ ಸ್ಕೂಲಿಂಗ್ ಎಂದು ಕರೆಯುತ್ತಾರೆ. ದೇಶವ್ಯಾಪಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ) ಕುರಿತು ಚರ್ಚೆಯಾಗುತ್ತಿದ್ದರೆ, ಶಾಲೆಯ ಶಿಕ್ಷಣವೇ ಬೇಡ ಮನೆಯಲ್ಲಿಯೇ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವ ಈ ಪೋಷಕರ ಜೊತೆಗೆ ನಡೆಸಿದ ಮಾತುಕತೆ ಅರಳಿಕಟ್ಟೆಯ ಹತ್ತೊಂಭತ್ತನೆಯ ಸಂಚಿಯಲ್ಲಿ ನಿಮ್ಮ ಮುಂದಿದೆ.

ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಗಂಗಾಧರ್ ಕೃಷ್ಣನ್,ರಮ್ಯ ಭಾರದ್ವಾಜ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.

Recording date: 20 July 2020

Credits:

Music : Crescents by Ketsa Licensed under creative commons.

Icon made by Freepik from www.flaticon.com