Listen

Description

ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ.

ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು.

ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು.

ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗದಲ್ಲಿ ನಾವು ಕಾಸರವಳ್ಳಿಯಲ್ಲಿನ ಗಿರೀಶರ ಬಾಲ್ಯ, ಎತ್ತಿನ ಗಾಡಿಯಲ್ಲಿ ಮನೆಮಂದಿ ಸಿನೆಮಾ ನೋಡಲು ಹೋಗುತ್ತಿದ್ದ ನೆನಪು, ಮೊದಲ ಬಾರಿಗೆ ಜಾಗತಿಕ ಸಿನೆಮಾಗೆ ತೆರೆದುಕೊಂಡ ಅನುಭವ, ಪುಣೆಯ ಸಿನೆಮಾ ಸಂಸ್ಥೆಯಲ್ಲಿನ ಓದು, ತರಬೇತಿ, ಅನಂತಮೂರ್ತಿಯವರೊಂದಿಗಿನ ಒಡನಾಟ, ಅಡ್ಡೂರು ಗೋಪಾಲಕೃಷ್ಣ, ಯು.ಆರ್.ಅನಂತಮೂರ್ತಿಯವರ ಕುರಿತ ಸಾಕ್ಷ್ಯಚಿತ್ರಗಳು ಹೀಗೆ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ.

ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ.

Recording date: 06 February 2022

Credits: Music: Crescents by Ketsa Licensed under creative commons. Icon made by Freepik from www.flaticon.com

Show Notes