ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ.
ಅರಳಿಕಟ್ಟೆಯ ೧೦೪ನೆಯ ಸಂಚಿಕಯಲ್ಲಿ ನಮ್ಮ ಜೊತೆಗಿರುವವರು ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್.
ವ್ಯಕ್ತಿಯೊಬ್ಬನ ಜನ್ಮದಿಂದ ಶುರುವಾಗಿ ಮರಣದವರೆಗೆ ಅನ್ವಯವಾಗುವ ಕಾನೂನುಗಳು ಭಾರತದಲ್ಲಿ ಬೆಳೆದು ಬಂದ ದಾರಿ ಯಾವುದು? ಧರ್ಮಕ್ಕೂ ಕಾನೂನಿಗೂ ಇರುವ ವ್ಯತ್ಯಾಸವೇನು? ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಇಸ್ಮಾಮಿಕ್ ಷರಿಯಾ ಮೊದಲಾದ ನ್ಯಾಯಪದ್ಧತಿಗಳನ್ನು ದಾಟಿ ಭಾರತ ತನ್ನದೇ ಆದ ಸಂವಿಧಾನವನ್ನು ಕಟ್ಟಿಕೊಂಡಿದ್ದು ಹೇಗೆ?
ಹಳೆಯ ಯುಗಾಸ್ಲಾವಿಯಾ ದೇಶದ ಸಂವಿಧಾನ ಹೊರತು ಪಡಿಸಿದರೆ ಭಾರತದ ಸಂವಿಧಾನವೇ ಜಗತ್ತಿನಲ್ಲಿ ಅತಿ ದೀರ್ಘವಾದ ಸಂವಿಧಾನ ಎನ್ನುವುದು ನಿಮಗೆ ತಿಳಿದಿದೆಯೇ? ೧೭೯೧ರಲ್ಲಿ ಜಾರಿಎ ಬಂದ ಅಮೇರಿಕಾದ ಸಂವಿಧಾನಕ್ಕೆ ಇದುವರೆಗೆ ೨೭ ತಿದ್ದು ಪಡಿಗಳಾಗಿದ್ದರೆ ೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನಕ್ಕೆ ಇದುವರೆಗೆ ೧೦೫ ತಿದ್ದುಪಡಿಗಳಾಗಿವೆ ಎನ್ನುವುದು ಗೊತ್ತೆ?
00:00 - ಇಂಟ್ರೋ
01:52 - ಅತಿಥಿ ಪರಿಚಯ
15:12 - ಕಾನೂನು ಏನು, ಏಕೆ?
20:49 - ಬ್ರಿಟೀಷರ ಆಳ್ವಿಕೆಯ ಹಿನ್ನೆಲೆ
28:34 - ಕಾನೂನುಗಳಲ್ಲಿ ಸನಾತನ ಧರ್ಮದ ಛಾಯೆ
45:32 - ಕಾನೂನು, ಸಮಾಜದ ನಡುವಿನ ಅಂತರ
Recording date: 30 October 2022
Credits: Music: Crescents by Ketsa Licensed under creative commons. Icon made by Freepik from www.flaticon.com