Listen

Description

ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ.

ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್ ರೊಂದಿಗಿನ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆ ಸಂಚಿಕೆ ೧೦೫ರ ರೂಪದಲ್ಲಿ ನಿಮ್ಮ ಮುಂದಿದೆ.

ಪ್ರಜೆಗಳಿಗೆ ಸಂವಿಧಾನ ನೀಡಿರುವ ಬದುಕುವ ಹಕ್ಕಿನಲ್ಲಿ ತಮ್ಮ ಜೀವ ತ್ಯಜಿಸುವ ಹಕ್ಕೂ ಸೇರಿದೆಯೇ? ಕೆಲವು ಪಾಶ್ಚಾತ್ಯ ದೇಶಗಳಲ್ಲಿ ದಯಾ ಮರಣ (ಯುಥನೇಶಿಯಾ)ಕ್ಕೆ ಅನುಮತಿ ಇರುವಂತೆ ಭಾರತದ ಕಾನೂನಿನಲ್ಲಿ ಯಾವ ರೀತಿಯ ಚರ್ಚೆಗಳು ನಡೆದವು? ಭಾರತದಲ್ಲಿ ಕಾನೂನು ಈ ಬಗೆಯ ಹೊಸ ಚರ್ಚೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ?

ಭಾರತದಲ್ಲಿ ಮದುವೆಯಾದ ದಂಪತಿಗಳು ಅಮೇರಿಕಾದ ಕೋರ್ಟಿನ ಎದುರು ವಿಚ್ಛೇದನ ಪಡೆಯಲು ಸಾಧ್ಯವೇ? ಸಂವಿಧಾನ ಆ ದೇಶದ ಪ್ರಜೆಗಳಿಗೆ ಕೊಡುವ ಹಕ್ಕುಗಳಿಗೂ ಅಂತರಾಷ್ಟ್ರೀಯ ಒಡಂಬಡಿಕೆಗಳಿಗೂ ಯಾವ ರೀತಿಯ ಸಂಬಂಧವಿದೆ?

ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಎರಡನೆಯ ಭಾಗದಲ್ಲಿದೆ.

00:00 - ಭಾರತದಲ್ಲಿ ಹೊಸ ಕಾನೂನುಗಳು

10:36 - ಬಹುರೂಪಿ ಸಮಾಜಕ್ಕೆ ಬಹುರೂಪಿ ಕಾನೂನುಗಳು ಬೇಕೆ?

14:44 - ಅಂತರಾಷ್ಟ್ರೀಯ ಕಾನೂನುಗಳ ಚೌಕಟ್ಟು

30:49 - ಭಯಹುಟ್ಟಿಸುವಲ್ಲಿ ಶಿಕ್ಷೆಯ ಪಾತ್ರ

36:51 - ಅಪರಾಧ ಕೇಂದ್ರಿತ - ಅಪರಾಧಿ ಕೇಂದ್ರಿತ ಕಾನೂನು

40:06 - ನ್ಯಾಯಾಧೀಶರು ಪಕ್ಷಾತೀತರಾಗಿ ತೀರ್ಪು ಕೊಡುವುದು ಹೇಗೆ?

Recording date: 30 October 2022

Credits: Music: Crescents by Ketsa Licensed under creative commons. Icon made by Freepik from www.flaticon.com