ಯುದ್ಧ, ಕ್ಷಾಮ ಹೀಗೆ ಏನೇ ಅವಘಡಗಳಾದರೂ ದೇಶವೊಂದರ ಶೇರು ಮಾರುಕಟ್ಟೆ ನಿಲ್ಲುವುದಿಲ್ಲವೇಕೆ? ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಇಡೀ ದೇಶ ತಿಂಗಳುಗಟ್ಟಲೆ ಬಂದ್ ಆಗಿದ್ದರೂ ಶೇರು ಮಾರುಕಟ್ಟೆ ಯಥಾವತ್ತಾಗಿ ನಡೆಯಲು ಹೇಗೆ ಸಾಧ್ಯ? ಒಂದೇ ದಿನದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಇಷ್ಟು ಕೋಟಿ ಹೆಚ್ಚಿತು, ಅಮೇಜಾನಿನ ಜೆಫ್ ಬೇಜೋಸ್ ಇವತ್ತು ಬಿಲಿಯನ್ ಡಾಲರ್ ಕಳೆದುಕೊಂಡ ಎಂದು ಸುದ್ದಿ ಮಾಧ್ಯಮಗಳಲ್ಲಿ ಓದುತ್ತೀರಿ. ನಿಜಕ್ಕೂ ಇಲ್ಲಿ ಆಗುವುದೇನು? ದಿನವೊಂದರಲ್ಲಿ ಅಷ್ಟು ಹಣ ಸಂಪಾದಿಸಲು ಇಲ್ಲವೇ ಕಳೆದುಕೊಳ್ಳಲು ಹೇಗೆ ಸಾಧ್ಯ?
ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಇಪ್ಪತ್ತೊಂದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Credits:
Music : Crescents by Ketsa Licensed under creative commons.
Icon made by Freepik from www.flaticon.com