ಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಮೊದಲ ಭಾಗ ಇಪ್ಪತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
ಈ ಸಂಚಿಕೆಯಲ್ಲಿ ನಾವು ಪುನೀತ್ ರ ಬಾಲ್ಯ, ಓದಿನ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪೋಷಕರ ಪಾತ್ರ, ಪುನೀತ್ ತಮ್ಮ ಸೃಜನಶೀಲ ಪ್ರಯತ್ನಗಳನ್ನು ಯೋಜಿಸುವ, ಕಾರ್ಯರೂಪಕ್ಕೆ ತರುವ ಕ್ರಮ, ಕನ್ನಡ ಅಂತರ್ಜಾಲದಲ್ಲಿ ಮನರಂಜನೆ ಬೆಳೆದು ಬಂದ ಬಗೆ ಹೀಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.
Credits:
Music : Crescents by Ketsa Licensed under creative commons.
Icon made by Freepik from www.flaticon.com