Listen

Description

ಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಇಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

ಈ ಸಂಚಿಕೆಯಲ್ಲಿ ನಾವು ಕನ್ನಡದಲ್ಲಿ ಹೊಸ ಪ್ರಯತ್ನಗಳು ಯಶಸ್ವಿಯಾಗುವುದಕ್ಕೆ ಏಕೆ ತುಂಬಾ ಸಮಯ ಹಿಡಿಯುತ್ತದೆ, ಯುಟ್ಯೂಬಿನಲ್ಲಿ ವಿಡಿಯೋಗಳನ್ನು ಮಾಡುವವರು ಎಷ್ಟು ಹಣ ಮಾಡುತ್ತಾರೆ, ಟಿಕ್ ಟಾಕ್, ಯುಟ್ಯೂಬ್ ಗಳಿಂದ ಎಲ್ಲರೂ ಚಲನಚಿತ್ರ ತಾರೆಯರಂತೆ ಜನಪ್ರಿಯರಾಗಬಹುದು ಎನ್ನುವ ಆಶಾವಾದ ಎಷ್ಟು ನಿಜ? ಹೀಗೆ ಹಲವು ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.

ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಪುನೀತ್ ಬಿ ಎ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.

Recording date: 09 August 2020

Credits:

Music : Crescents by Ketsa Licensed under creative commons.

Icon made by Freepik from www.flaticon.com