ತಿನ್ನಲು ಆಹಾರವಿಲ್ಲದೆ ಮನುಷ್ಯ ದಿನಗಟ್ಟಲೆ ಬದುಕಿರಬಲ್ಲ ಆದರೆ ಸತತವಾಗಿ ನಿದ್ದೆಯನ್ನು ತಪ್ಪಿಸಿದರೆ ಬದುಕಿರಲು ಅಸಾಧ್ಯ. ದಿನದ ಮೂರನೇ ಒಂದು ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಮನುಷ್ಯರಷ್ಟೇ ಅಲ್ಲ, ಇದುವರೆಗೆ ಅಧ್ಯಯನ ಮಾಡಿರುವ ಪ್ರತಿಯೊಂದು ಪ್ರಾಣಿಗೂ ನಿದ್ದೆ ಅತ್ಯವಶ್ಯಕ.
ಜೀವಿಗಳ ವಿಕಾಸದ ಹಾದಿಯನ್ನು ಗಮನಿಸಿದರೆ ನಿದ್ದೆ ಬಹುದೊಡ್ಡ ತೊಡಕಾಗಿ ಕಾಣುತ್ತದೆ. ನಿದ್ರಿಸುವಾಗ ಜೀವಿ ಆಹಾರವನ್ನು ಅರಸಲು ಸಾಧ್ಯವಿಲ್ಲ, ಪರಭಕ್ಷಕ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ, ಸಂತಾನೋತ್ಪತ್ತಿ, ಪೋಷಣೆಯಲ್ಲಿ ತೊಡಗಲು ಸಾಧ್ಯವಿಲ್ಲ. ಇಷ್ಟೆಲ್ಲ ಅನನಕೂಲಗಳಿದ್ದರೂ ನಿಸರ್ಗದಲ್ಲಿ ನಿದ್ದೆ ಪ್ರತಿಯೊಂದು ಜೀವಿಗೂ ಏಕೆ ಅತ್ಯಗತ್ಯ? ನಿದ್ದೆಗೆಟ್ಟರೆ ಆಗುವ ಅನಾಹುತಗಳೇನು ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಡಾ. ಮ್ಯಾಥ್ಯು ವಾಕರ್ ಬರೆದಿರುವ ಜನಪ್ರಿಯ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ" (Why we sleep: Unlocking the Power of Sleep and Dreams) ಈ ಸಂಚಿಕೆಯ ಚರ್ಚೆಯ ವಿಷಯ.
Credits:
Music : Crescents by Ketsa Licensed under creative commons.
Icon made by Freepik from www.flaticon.com