Listen

Description

ಕನ್ನಡಿಗರು ದೊಡ್ಡ ಉದ್ದಿಮೆಗಳನ್ನು ತೆರೆಯುವಲ್ಲಿ, ಹೊಸತನದ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಏಕೆ ಹಿಂದೆ ಬೀಳುತ್ತಾರೆ? ನಮ್ಮ ನೆರೆಯ ತಮಿಳರು, ತೆಲುಗರು, ಮಲಯಾಳಿಗಳಿಗೆ ಹೋಲಿಸಿದರೆ ಕನ್ನಡಿಗರು ಏಕೆ ತಮ್ಮ ಭಾಷೆಯ ಕುರಿತ ಸಶಕ್ತವಾದ ಐಡೆಂಟಿಟಿ ಹೊಂದಿಲ್ಲ? ಇದಕ್ಕೆ ಐತಿಹಾಸಿಕ, ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಕಾರಣಗಳಿವೆಯೇ?

ಕನ್ನಡವನ್ನು ಸೀಮಿತವಾದ ಭಾವನಾತ್ಮಕ ನೆಲೆಯಲ್ಲಿ ನೋಡದೆ ದಿನನಿತ್ಯದ ಬದುಕಿನಲ್ಲಿ ಕನ್ನಡಿಗರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುವುದು ಹೇಗೆ? ರಾಜಕೀಯ ಪಕ್ಷಗಳು ನಮ್ಮ ನುಡಿಯ ಕುರಿತಾದ ಸಮಸ್ಯೆಗಳಿಗೆ ಕಿವಿಗೊಡುವಂತೆ ಮಾಡುವುದು ಹೇಗೆ?

ನಮ್ಮ ನುಡಿಯಲ್ಲಿ ಸೇವೆಗಳನ್ನು ಒದಗಿಸಲು ಸರ್ಕಾರ ಸೋತಿರುವಲ್ಲಿ ಮಾರುಕಟ್ಟೆ ಗೆದ್ದಿರುವುದು ಹೇಗೆ? ಕನ್ನಡಿಗರು ತಮ್ಮ ಕೀಳರಿಮೆಯನ್ನು ತೊಡೆದು ಆತ್ಮವಿಶ್ವಾಸದಿಂದ ನಮ್ಮದೇ ಭಾಷೆಯಲ್ಲಿ ಸೇವೆಗಳನ್ನು ಆಗ್ರಹಿಸುವುದು ಏಕೆ ಅಗತ್ಯ?

ಇವೇ ಮೊದಲಾದ ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಕನ್ನಡದ ಕೆಲಸಗಳಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿರುವ ವಸಂತ್ ಶೆಟ್ಟಿಯವರೊಂದಿಗೆ ಮಾತನಾಡಿದ್ದೇವೆ. ಕನ್ನಡದಲ್ಲಿ ಇ ಪುಸ್ತಕ, ಆಡಿಯೋ ಪುಸ್ತಕಗಳನ್ನು ಪ್ರಕಟಿಸಲು ಅವರು ಶುರು ಮಾಡಿರುವ ಮೈ ಲ್ಯಾಂಗ್ ಸಂಸ್ಥೆಯ ಕುರಿತೂ ಹಲವು ಒಳನೋಟಗಳುಳ್ಳ ಚರ್ಚೆ ಅರಳಿಕಟ್ಟೆಯ ೨೬ನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ವಸಂತ ಶೆಟ್ಟಿ.



Credits:  Music: Crescents by Ketsa Licensed under creative commons.  

Icon made by Freepik from www.flaticon.com