Listen

Description

ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವಗಳಲ್ಲಿ ಒಂದಾದ ಅಮೇರಿಕಾ ತನ್ನ ನಲವತ್ತಾರನೆಯ ಅಧ್ಯಕ್ಷನನ್ನು ನವೆಂಬರ್ ೩ನೇ ತಾರೀಖು ಆಯ್ಕೆ ಮಾಡುತ್ತಿದೆ. ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇಲ್ಲವೇ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಕುರಿತು ಕುಟ್ಟಿದ ತವಡನ್ನೇ ಕುಟ್ಟುವುದು ಬಿಟ್ಟು ಅರಳಿಕಟ್ಟೆಯಲ್ಲಿ ನಾವು ವಿಶಿಷ್ಟವಾದ ಚರ್ಚೆ ನಡೆಸಿದ್ದೇವೆ.

ಇಪ್ಪತ್ತು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ರಘು ಹಲೂರು ನಮ್ಮೊಂದಿಗೆ ಅಮೇರಿಕಾದ ರಾಜಕೀಯ ವ್ಯವಸ್ಥೆ ಹೇಗೆ ನಿರ್ಮಿತವಾಗಿದೆ. ಅಧಿಕಾರ ವಿಕೇಂದ್ರಿಕರಣಕ್ಕೆ ಇರುವ ಸರಕಾರದ ವಿವಿಧ ಅಂಗಗಳು ಯಾವುವು. ಫೆಡರಲಿಸಂ ಹೇಗೆ ಕೆಲಸ ಮಾಡುತ್ತದೆ. ಈ ವಿಷಯಗಳಲ್ಲಿ ಭಾರತಕ್ಕೂ ಅಮೇರಿಕಾಗೂ ಇರುವ ವ್ಯತ್ಯಾಸಗಳೇನು  ಹೇಗೆ ಹಲವು ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಇಪ್ಪತ್ತೊಂಭತ್ತನೆಯ ಸಂಚಿಕೆಯಲ್ಲಿ ನಿಮ್ಮ  ಮುಂದಿದೆ.

ಚರ್ಚೆಯಲ್ಲಿ ಭಾಗವಹಿಸಿದವರು: ರಘು ಹಲೂರು, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್.ಕೆ.ಎಸ್.

Recording date: 07 October 2020

Credits: Music: Crescents by Ketsa Licensed under creative commons. Icon made by Freepik from www.flaticon.com