ವ್ಯವಸ್ಥೆಯಲ್ಲಿ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾದರೆ ಕ್ರೌರ್ಯ ಹೆಚ್ಚುತ್ತದೆ. ಹೀಗೆ ಅಧಿಕಾರ ಒಂದೆಡೆ ಕೇಂದ್ರೀಕೃತವಾಗಬಾರದು ಎಂದು ಹಲವು ರಾಷ್ಟ್ರಗಳು ತಮ್ಮ ಸಂವಿಧಾನಗಳಲ್ಲಿ ಸ್ಪಷ್ಟವಾಗಿ ಕೇಂದ್ರ ಹಾಗೂ ಪ್ರಾದೇಶಿಕ ಸರಕಾರಗಳ ಅಧಿಕಾರಗಳನ್ನು ವಿಂಗಡಣೆ ಮಾಡಿಕೊಂಡಿವೆ. ಈ ಹೊಂದಾಣಿಕೆಗೆ ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂ ಎಂದು ಕರೆಯಬಹುದು.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಫೆಡರಲಿಸಂ ಅನೇಕ ರೀತಿಯಲ್ಲಿ ಬಳಕೆಗೆ ಬಂದಿದೆ. ಅಮೇರಿಕಾದಲ್ಲಿ ಪ್ರತಿ ರಾಜ್ಯವೂ ತನ್ನ ಸಂವಿಧಾನವನ್ನು ನಿರ್ಮಿಸಿಕೊಳ್ಳುವ ಅಧಿಕಾರ ಹೊಂದಿದ್ದರೆ ಭಾರತದಲ್ಲಿ ಕೇಂದ್ರ ಸರಕಾರ ರಾಜ್ಯಗಳನ್ನು ಒಡೆದು ವಿಂಗಡಿಸಿವೆ. ಶ್ರೀಮಂತ ರಾಷ್ಟ್ರ ಸ್ವಿಟ್ಜರ್ ಲ್ಯಾಂಡ್ ಫೆಡರಲಿಸಂನ ಅತ್ಯುತ್ತಮ ಉದಾಹರಣೆಯಾದರೆ ನಮ್ಮ ನೆರೆಯ ಪಾಕಿಸ್ಥಾನ ಕೂಡ ಫೆಡರಲ್ ರಾಷ್ಟ್ರ ಎಂದು ತಿಳಿದು ಗೊಂದಲ ಮೂಡುತ್ತದೆ.
ಇಂಜಿನಿಯರಿಂಗ್ ಓದಿದ ನಂತರ ಪಬ್ಲಿಕ್ ಪಾಲಿಸಿ ಕಲಿಯಲು ತೊಡಗಿದ ರಕ್ಷಿತ್ ಪೊನ್ನತ್ಪುರ ಈ ವಾರದ ಅತಿಥಿ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕೇವಲ ಮೇಲ್ಪದರಲ್ಲಿ ಚರ್ಚಿಸಲ್ಪಡುವ ಈ ವಿಷಯವನ್ನು ಅದರ ಎಲ್ಲಾ ಸೂಕ್ಷ್ಮಗಳೊಂದಿಗೆ ನಾವು ಅರಳಿಕಟ್ಟೆಯ ೩೪ ನೆಯ ಸಂಚಿಕೆಯಲ್ಲಿ ಚರ್ಚಿಸಿದ್ದೇವೆ.
ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.
Recording date: 27 September 2020
Credits: Music: Crescents by Ketsa Licensed under creative commons. Icon made by Freepik from www.flaticon.com