Listen

Description

ಸರಕಾರ ತಮ್ಮನ್ನು ನಿಯಂತ್ರಿಸಬಾರದು ಎಂದು ಟಿವಿ ಚಾನೆಲ್ಲುಗಳು ಸ್ವಯಂ ನಿಯಂತ್ರಣದ ವ್ಯವಸ್ಥೆಯೊಂದನ್ನು ಹೊಂದಿವೆ. ಜನ ಸಾಮಾನ್ಯರು ಈ ಮಾಧ್ಯಮಗಳ ವಿರುದ್ಧ ದೂರು ದಾಖಲಿಸಲು ಈ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಓದುವ ದಿನಪತ್ರಿಕೆಯೊಂದನ್ನು ಮುದ್ರಿಸಿ ಹಂಚುವುದಕ್ಕೆ ಎಷ್ಟು ಹಣ ಖರ್ಚಾಗುತ್ತದೆ, ಇದಕ್ಕೆ ಬೇಕಾದ ಬಂಡವಾಳವನ್ನು ಪತ್ರಿಕೆಗಳು ಹೇಗೆ ಹೊಂದಿಸುತ್ತವೆ ಎನ್ನುವುದು ನಿಮಗೆ ಗೊತ್ತೆ? ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಸುದ್ದಿ ಪತ್ರಿಕೆಗಳ ಮುಖಬೆಲೆ ಭಾರತದ ಪತ್ರಿಕೆಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ಎನ್ನುವುದು ನಿಮಗೆ ತಿಳಿದಿದೆಯೇ?

ಈ ವಾರದ ಸಂಚಿಕೆಯಲ್ಲಿ ನಾವು ಪತ್ರಿಕೋದ್ಯಮದಲ್ಲಿ ಇಪ್ಪತ್ಮೂರು ವರ್ಷ ವ್ಯಯಿಸಿ ಅಪಾರವಾದ ಅನುಭವ ಗಳಿಸಿರುವ ಕನ್ನಡಿಗ ಡಿ.ಪಿ.ಸತೀಶ್ ರೊಂದಿಗೆ ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಇರುವ ಭವಿಷ್ಯದ ಕುರಿತು ಅನೇಕ ಕುತೂಹಲಕರವಾದ ವಿಷಯಗಳನ್ನು ಚರ್ಚಿಸಿದ್ದೇವೆ.

Recording date: 25 October 2020

Credits: Music: Crescents by Ketsa Licensed under creative commons. Icon made by Freepik from www.flaticon.com