Listen

Description

ವರನಟ ರಾಜಕುಮಾರ್ ವೀರಪ್ಪನ್ ಸೆರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಬಳಿ ಬೈಟ್ ಪಡೆದ ಪತ್ರಕರ್ತರೊಬ್ಬರು "ನಿಮ್ಮ ಹೆಸರು ಹಾಗೂ ವೃತ್ತಿಯೇನು ಸರ್?" ಎಂದು ಕೇಳಿದ್ದರು. ಇತ್ತೀಚೆಗೆ ಪ್ರತಿಭಟನೆಯೊಂದನ್ನು ವರದಿ ಮಾಡಲು ಇತಿಹಾಸಕಾರ ರಾಮಚಂದ್ರ ಗುಹಾರನ್ನು ಸಂದರ್ಶಿಸಿದ ಪತ್ರಕರ್ತೆ "ನೀವು ಯಾರು ಸರ್?" ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಬೈಟ್ ಸಂಗ್ರಹಿಸುವ ನೌಕರರಾಗಿ ಕುಗ್ಗಿ ಹೋಗಿರುವುದು ಇಂದು ನಿನ್ನೆಯ ಬೆಳವಣಿಗೆಯೇನು ಅಲ್ಲ.

ಇಂಥದ್ದೇ ಹತ್ತು ಹಲವು ರಸಭರಿತ ಒಳನೋಟಗಳುಳ್ಳ ಹಿರಿಯ ಪತ್ರಕರ್ತ ಸತೀಶ್.ಡಿ.ಪಿ ಜತೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಮುವತ್ತೊಂಭತ್ತನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

Recording date: 25 October 2020

Credits: Music: Crescents by Ketsa Licensed under creative commons. Icon made by Freepik from www.flaticon.com