Listen

Description

ಅರಳಿಕಟ್ಟೆಯ ಸಮಸ್ತ ಕೇಳುಗರಿಗೆ ಹಾಗೂ ವೀಕ್ಷಕರಿಗೆ ಹೊಸ ವರ್ಷದ ಶುಭಾಶಯಗಳು. ೨೦೨೧ ನಿಮ್ಮೆಲ್ಲ ಕನಸುಗಳನ್ನು ನನಸಾಗಿಸಲಿ ಎಂದು ಹಾರೈಸುತ್ತೇವೆ.

ಧಾರ್ಮಿಕ ಮೂಲಭೂತವಾದಿಗಳು, ದಮನಕಾರಿ ಸರಕಾರಗಳು ಖಾಸಗಿ ವ್ಯಕ್ತಿಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಉದಾಹರಣೆಗಳನ್ನು ನಾವು ಸಾಕಷ್ಟು ಕಂಡಿರುತ್ತೇವೆ. ಜಾತಿ ದ್ವೇಷದ ಹೆಸರಿನಲ್ಲಿ ಕುಟುಂಬಗಳನ್ನು ಬಹಿಷ್ಕಾರ ಹಾಕುವ ಅವರೊಂದಿಗೆ ಎಲ್ಲಾ ಬಗೆಯ ಸಾಮಾಜಿಕ ನಂಟನ್ನು ಕಡಿದುಕೊಳ್ಳುವ ಪದ್ಧತಿ ಹಲವು ಹಳ್ಳಿಗಳಲ್ಲಿ ಜಾರಿಯಲ್ಲಿರುವುದನ್ನು ನಾವು ಕೇಳಿ ತಿಳಿದಿರುತ್ತೇವೆ.

ಆದರೆ ಅಮೆರಿಕಾದಿಂದ ಮೊದಲಾಗಿ ಅನೇಕ ಪಾಶ್ಬಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ಗುರುತಿಸಲಾಗಿರುವ ಕ್ಯಾನ್ಸಲ್ ಕಲ್ಚರ್ ಎಂಬ ಹೊಸತೊಂದು ಬಗೆಯ ದಮನಕಾರಿ ಸಂಸ್ಕೃತಿಯ ಬಗ್ಗೆ ನಿಮಗೆಷ್ಟು ಗೊತ್ತು? ಈ ಸಂಸ್ಕೃತಿಯು ವಿಶ್ವವೇ ಕೊಂಡಾಡುವ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ತೆರವು ಗೊಳಿಸಬೇಕು ಎಂದು ಪಟ್ಟು ಹಿಡಿಯುತ್ತದೆ, ಎರಡನೆಯ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಬ್ರಿಟನ್ನನ್ನು ವಿಜಯದೆಡೆಗೆ ಮುನ್ನಡೆಸಿದ ನಾಯಕ ವಿನ್ಸ್ಟನ್ ಚರ್ಚಿಲ್ ಗೆ ಮನ್ನಣೆ ಕೊಡಬಾರದು ಎಂದು ಸಮರ್ಥಿಸುತ್ತದೆ. ಈ ಸಂಸ್ಕೃತಿಯ ಹರಿಕಾರರ ಕೋಪಕ್ಕೆ ಗುರಿಯಾದರೆ ಒಂದು ಸಣ್ಣ ತಪ್ಪಿಗೆ, ಕ್ಷಣಾರ್ಧದಲ್ಲಿ ವರ್ಷಗಳಿಂದ ಕಟ್ಟಿಕೊಂಡ ಕರಿಯರ್ ಸರ್ವನಾಶವಾಗಿ ಹೋಗುತ್ತದೆ.

ಇಂತಹ ವಿಲಕ್ಷಣವಾದ ಸಂಸ್ಕೃತಿ ಬೆಳೆಯಲು ಕಾರಣವಾದ ಅಂಶಗಳೇನು, ಇದು ಜನಪ್ರಿಯವಾಗುವಕ್ಕೆ ಇರುವ ಮನಃಶಾಸ್ತ್ರೀಯ ಕಾರಣಗಳು ಯಾವುವು? ಕ್ಯಾನ್ಸಲ್ ಸಂಸ್ಕೃತಿಯಲ್ಲಿ ತೊಡಗಿದವರು ತಾವು ಮಾಡುವುದೆಲ್ಲ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಎಂದು ಪ್ರಾಮಾಣಿಕವಾಗಿ ನಂಬಿಕೊಂಡಿದ್ದರೂ ಅದರಿಂದ ತಮಗೆ ಹಾಗೂ ಸುತ್ತಲಿನ ಸಮಾಜದಲ್ಲಿ ಆಗುವ ಅನಾಹುತಗಳೇನು ಎನ್ನುವ ಕುತೂಹಲಕಾರಿ ಪ್ರಶ್ನೆಗಳನ್ನೆತ್ತಿಕೊಂಡು ನಾವು ನಡೆಸಿದ ಚರ್ಚೆ ಅರಳಿಕಟ್ಟೆಯ ನಲವತ್ತನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

ಇನ್ನಷ್ಟು ಆಸಕ್ತಿಕರವಾದ ಚರ್ಚೆಗಳನ್ನು ಕನ್ನಡದಲ್ಲಿ ಕಟ್ಟಿಕೊಡಲು ನಿಮ್ಮ ಬೆಂಬಲ ಅತ್ಯಗತ್ಯ. ಯುಟ್ಯೂಬಿನಲ್ಲಿ ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಇದರಿಂದ ನಾವು ನಿಮ್ಮಂತಹ ಇನ್ನಷ್ಟು ಕೇಳುಗರನ್ನು ತಲುಪಲು ನೆರವಾಗುತ್ತದೆ.

ಈ ಸಂಚಿಕೆಯಲ್ಲಿ ಉಲ್ಲೇಖಿಸಿದ ವಿಚಾರಗಳ ಕುರಿತ ಮಾಹಿತಿ:

- Mental models to understand the world Part 1: https://www.youtube.com/watch?v=C8FfMHzJ2ro

- Mental models to understand th world part 2: https://www.youtube.com/watch?v=oCiikEgeIAQ

- Thomas Sowell's book - A conflict of visions : https://www.youtube.com/watch?v=COTkCUs0WKY

- Yuval Noah Hariri's book Sapiens : https://www.youtube.com/watch?v=qaS7dvhNlis

Recording date: 04 October 2020

Credits: Music: Crescents by Ketsa Licensed under creative commons. Icon made by Freepik from www.flaticon.com