Listen

Description

ಒಂದು ಬೆಲ್ಟ್ ಒಂದು ರೋಡ್ ಚೀನಾದ ಕಮ್ಯುನಿಸ್ಟ್ ಪಕ್ಷದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ೨೦೧೩ರಲ್ಲಿ ಚಾಲನೆಗೊಂಡಿತು. ೭೦ಕ್ಕಿಂತ ಹೆಚ್ಚು ರಾಷ್ಟ್ರಗಳ ನಡುವೆ ನಿಕಟವಾದ ವ್ಯಾಪಾರದ ನಂಟು ಬೆಸೆಯುವ ದೊಡ್ಡ ಕನಸನ್ನು ಚೀನಾ ಹೊಂದಿದೆ. ಇದರ ಭೌಗೋಳಿಕ ವ್ಯಾಪ್ತಿಯಷ್ಟೇ ದೊಡ್ಡದು ಇದರ ಕಾಲಾವಧಿ. ೨೦೪೯ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಚೀನಾದ್ದು.

ಈ ಯೋಜನೆ ಚೀನಾದ ವಿದೇಶಾಂಗ ನೀತಿಗೆ ಎಷ್ಟು ಮುಖ್ಯವೆಂದರೆ, ೨೦೧೭ರಲ್ಲಿ ಯೋಜನೆಯ ಅನುಷ್ಠಾನದ ಗುರಿಯನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ೨೦೪೯ರೊಳಗೆ ಸರಕಾರದಲ್ಲಿ ಏನೇ ಬದಲಾವಣೆಗಳಾದರೂ ಯೋಜನೆಯ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗದು.

ಈ ಯೋಜನೆಯ ಹಿಂದಿರುವ ಚೀನಾದ ಮಹತ್ವಾಕಾಂಕ್ಷೆ ಏನು? ನಮ್ಮ ನೆರೆಯ ಪಾಕಿಸ್ತಾನ, ಶ್ರೀಲಂಕದಿಂದ ಮೊದಲುಗೊಂಡು ದೂರದ ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ಇದರಲ್ಲಿ ಪಾಲುಗೊಂಡಿರುವ ರಾಷ್ಟ್ರಗಳ ಭವಿಷ್ಯವೇನು? ಭಾರತ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಈ ಯೋಜನೆಯನ್ನು ವಿರೋಧಿಸುತ್ತಿರುವುದೇಕೆ? ಇವೇ ಮೊದಲಾದ ಕುತೂಹಲಕಾರಿ ಅಂಶಗಳನ್ನು ವಿವರವಾಗಿ ಚರ್ಚಿಸುವ ಪೋರ್ಚುಗೀಸ್ ಲೇಖಕ ಬ್ರುನೋ ಮಶೆಸ್ ರ ಪುಸ್ತಕ "ಬೆಲ್ಟ್ ಅಂಡ್ ರೋಡ್, ಎ ಚೈನೀಸ್ ವರ್ಲ್ಡ್ ಆರ್ಡರ್" ಕುರಿತ ಚರ್ಚೆ ಅರಳಿಕಟ್ಟೆಯ ನಲವತ್ತೆರಡನೆಯ ಸಂಚಿಕೆಯಲ್ಲಿ...

Recording date: 8 November 2020

Credits: Music: Crescents by Ketsa Licensed under creative commons. Icon made by Freepik from www.flaticon.com