ದಿನನಿತ್ಯದ ಬಳಕೆಯ ವಸ್ತುಗಳಿಂದ ಹಿಡಿದು ಐಫೋನ್ ವರೆಗೆ ವಿನ್ಯಾಸ ಅಡಕಗೊಂಡಿರುತ್ತದೆ. ತಾಂತ್ರಿಕವಾಗಿ ಒಂದೇ ಗುಣಮಟ್ಟವಿದ್ದರೂ ಕೆಲವು ಉಪಕರಣಗಳು ತಮ್ಮ ಅತ್ಯುತ್ತಮವಾದ ವಿನ್ಯಾಸದಿಂದ ಬಳಸುವವರ ಜೀವನವನ್ನು ಉತ್ತಮಗೊಳಿಸಿದರೆ ಮತ್ತೆ ಕೆಲವು ಕಳಪೆ ವಿನ್ಯಾಸದಿಂದಾಗಿ ಕಿರಿಕಿರಿಯುಂಟು ಮಾಡುತ್ತವೆ.
ಬಳಕೆದಾರರ ಅನುಭವವನ್ನು ಉತ್ತಮಗೊಳಿಸುವ ಉದ್ದೇಶದಿಂದ ಉಪಕರಣಗಳನ್ನು, ಸೇವೆಗಳನ್ನು ವಿನ್ಯಾಸಗೊಳಿಸುವ ಶಿಸ್ತಿಗೆ ವಿನ್ಯಾಸ ಚಿಂತನೆ ಅಥವಾ ಡಿಸೈನ್ ಥಿಂಕಿಂಗ್ ಎಂದು ಕರೆಯುತ್ತಾರೆ. ಈ ವಾರದ ಸಂಚಿಕೆಯಲ್ಲಿ ನಾವು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ನಲ್ಲಿ ಪದವಿ ಪಡೆದ ಅರವಿಂದ ದೇವರಮನೆಯವರೊಂದಿಗೆ ಡಿಸೈನ್ ಥಿಂಕಿಂಗಿನ ಹಲವು ಆಯಾಮಗಳನ್ನು ಚೇತೋಹಾರಿಯಾದ ಉದಾಹರಣೆಗಳೊಂದಿಗೆ ಚರ್ಚಿಸಿದ್ದೇವೆ.
ಜರ್ಮನಿಯಲ್ಲಿ ನಿರ್ಮಾಣವಾಗುವ ಉಪಕರಣಗಳು, ಜಪಾನ್, ಸ್ಕಾಂಡಿನೇವಿಯಾದಲ್ಲಿ ನಿರ್ಮಾಣವಾಗುವ ಉಪಕರಣಗಳ ವಿನ್ಯಾಸದಲ್ಲಿರುವ ಲಕ್ಷಣಗಳೇನು? ನಮ್ಮ ದೇಶದ ಚೊಂಬಿನ ವಿನ್ಯಾಸ ವಿಶ್ವದಲ್ಲೇ ವಿಶಿಷ್ಟವಾದದ್ದು ಏಕೆ? ದೇವರಮನೆಯ ಇರುವೆ ಚಟ್ನಿ ಕುರಿತು ಕೇಳಿದ್ದೀರಾ? ಬೆಂಗಳೂರಿನಲ್ಲಿ ದರ್ಶಿನಿ ಹೋಟೆಲ್ ಪ್ರಾರಂಭಿಸಿದವರು ಯಾರು ಗೊತ್ತೆ? ಪಾರಂಪರಿಕ ಭಾರತೀಯ ಶೌಚಾಲಯ ಹಾಗೂ ಅಡುಗೆ ಮನೆಗಳಲ್ಲಿ ಅಡಗಿರುವ ವಿನ್ಯಾಸದ ತತ್ವಗಳೇನು? ಹೀಗೆ ಹಲವು ಒಳಸುಳಿಗಳುಳ್ಳ ಆಸಕ್ತಿಕರ ಚರ್ಚೆ ಅರಳಿಕಟ್ಟೆಯ ನಲವತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 23 November 2020
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes:
- volkswagen designer giorgetto jujiro
- Dieter Rams: 10 Timeless Commandments for Good Design: https://www.interaction-design.org/literature/article/dieter-rams-10-timeless-commandments-for-good-design
- R Prabhakar founder of Darshini hotels - https://economictimes.indiatimes.com/small-biz/startups/r-prabhakar-the-man-behind-bengalurus-darshinis/articleshow/45224627.cms
- ChewDa.com is a platform to bring together amazing ladies who can prepare yummy snacks, pickles, instant food mixes, masalas and much more.. https://www.chewda.com