Listen

Description

ಈ ವರ್ಷ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಮಸ್ಕ್ ತನ್ನ ದಣಿವರಿಯದ ಪರಿಶ್ರಮದಿಂದ ಹೆಸರುವಾಸಿ. ಆದರೆ ಆತನ ವ್ಯಕ್ತಿತ್ವಕ್ಕೆ ಕರಾಳ ಮುಖವೂ ಇದೆ. ವರ್ಷಗಟ್ಟಲೆ ತನ್ನ ಕಂಪೆನಿಯಲ್ಲಿ ನಿಯತ್ತಿನಿಂದ ಕೆಲಸ ಮಾಡಿದವರನ್ನು ಆತ ಚೂರೂ ಅನುಕಂಪವಿಲ್ಲದೆ ಮನೆಗೆ ಕಳುಹಿಸಿದ ಉದಾಹರಣೆಗಳಿವೆ. ತನ್ನ ಕಂಪೆನಿಗಳಲ್ಲಿ ನೌಕರಿಗೆ ಆಯ್ಕೆಯಾಗುವವರಿಗೆ ಗೆಳೆಯ/ಗೆಳತಿಯರು ಇರಬಾರದು ಹಾಗೂ ಅವರು ತಮ್ಮ ಸಂಪೂರ್ಣ ಸಮಯವನ್ನು ಕೆಲಸಕ್ಕೆ ಮೀಸಲಿಡಬೇಕು ಎಂದು ಅಪೇಕ್ಷಿಸುತ್ತಾನೆ. ತನ್ನ ಮಗುವಿನ ಜನನಕ್ಕೆ ಸಾಕ್ಷಿಯಾಗಲು ಕೆಲಸ ತಪ್ಪಿಸಿಕೊಂಡ ನೌಕರನಿಗೆ ಮಸ್ಕ್ ಕಟ್ಟುನಿಟ್ಟಾದ ಟಿಪ್ಪಣಿ ಬರೆಯುತ್ತಾನೆ: "ನಮ್ಮ ಸಂಸ್ಥೆಯಲ್ಲಿ ನಾವು ಜಗತ್ತನ್ನೇ ಬದಲಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದೇವೆ. ನಿನಗೆ ಕೆಲಸ ಮುಖ್ಯವೋ ಅಥವಾ ಕುಟುಂಬ ಮುಖ್ಯವೋ ಎಂದು ನಿರ್ಧರಿಸು."!

ಆದಾಗ್ಯೂ ಅಮೇರಿಕಾದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿ, ವಿದ್ಯಾಥಿನಿಯರು ಈಲಾನ್ ನ ಕಂಪೆನಿಗಳಲ್ಲಿ ಕೆಲಸ ಮಾಡಲು ಹಾತೊರೆಯುತ್ತಾರೆ. ಪ್ರತಿಷ್ಠಿತ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು ಅಲ್ಲಿನ ಬ್ಯೂರಕ್ರಸಿಯಿಂದ ಬೇಸತ್ತು ಈಲಾನ್ ನ ಕಂಪೆನಿಗಳಲ್ಲಿ ತಮ್ಮ ಸೃಜನಶೀಲತೆಗೆ ದೊರೆಯುವ ಸ್ವಾತಂತ್ರ್ಯಕ್ಕಾಗಿ ಕೆಲಸಕ್ಕೆ ಸೇರುತ್ತಾರೆ.

ಹೀಗೆ ಅನೇಕ ದ್ವಂದ್ವಗಳ ಪ್ರತಿರೂಪವಾದ ಈಲಾನ್ ಮಸ್ಕ್ ಕುರಿತು ಅಮೇರಿಕಾದ ಪತ್ರಕರ್ತ ಆಶ್ಲೀ ವ್ಯಾನ್ಸ್ ಬರೆದಿರುವ ಅಧಿಕೃತ ಜೀವನ ಚರಿತ್ರೆ ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ನಲವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್, ಸುಪ್ರೀತ್ ಹಾಗೂ ವಾಸುಕಿ.

Recording date: 26 December 2020

Credits: Music: Crescents by Ketsa Licensed under creative commons. Icon made by Freepik from www.flaticon.com