Listen

Description

ಎಂ.ಜಿ ರೋಡಿನ ಹೊಟೇಲೊಂದರಲ್ಲಿನ ಹರಟೆಯಲ್ಲಿ ಹೀಗೆ ಬಂದು ಹಾಗೆ ಮಾಯವಾಗಿದ್ದ ಐಡಿಯಾವೊಂದು ಕಾರ್ಯರೂಪಕ್ಕೆ ಬಂದು ಇವತ್ತಿಗೆ ಐವತ್ತು ವಾರಗಳು ಸಂದಿವೆ. ಏಪ್ರಿಲ್ ೫, ೨೦೨೦ರಂದು ಅರಳಿಕಟ್ಟೆಯ ಪಾಡ್ಕಾಸ್ಟಿನ ಮೊದಲ ಸಂಚಿಕೆ ಪ್ರಕಟವಾಯಿತು. ಈ ಪ್ರಯತ್ನ ಎಷ್ಟು ದಿನ ನಡೆಯಬಹುದು ಎನ್ನುವ ಸಂಶಯ ನಮಗೂ ಇತ್ತು.

ವಾರಕ್ಕೊಂದು ಸಂಚಿಕೆಯಂತೆ ಕಳೆದ ನಲತ್ತೊಂಭತ್ತು ವಾರಗಳಲ್ಲಿ ಸಂಚಿಕೆಗಳನ್ನು ಪ್ರಕಟಿಸಿ ಈ ವಾರ ನಾವು ಐವತ್ತನೆಯ ಸಂಚಿಕೆಗೆ ಕಾಲಿರಿಸಿದ್ದೇವೆ. ಈ ವಿಶೇಷ ಸಂಚಿಕೆಯನ್ನು ನಾವು ಅರಳಿಕಟ್ಟೆ ಪಾಡ್ ಕಾಸ್ಟ್ ಯೋಜನೆ ಶುರುವಾದ ಬಗೆ, ಈ ಸಣ್ಣ ಪ್ರಯತ್ನಕ್ಕೆ ನಮಗೆ ಸಿಕ್ಕ ಅರ್ಥಪೂರ್ಣವಾದ ಬೆಂಬಲ ಹಾಗೂ ವಿಚಾರಪೂರ್ಣವಾದ ಪ್ರತಿಕ್ರಿಯೆ, ಪಾಡ್ ಕಾಸ್ಟ್ ಎಂಬ ಮಾಧ್ಯಮದ ಗುಣಲಕ್ಷಣಗಳು ಹೀಗೆ ಅನೇಕ ವಿಚಾರಗಳನ್ನು ಅವಲೋಕಿಸುವಕ್ಕೆ ಮೀಸಲಿಟ್ಟಿದ್ದೇವೆ.

ಅರಳಿಕಟ್ಟೆಯ ಚರ್ಚೆಗಳನ್ನು ಮಾಹಿತಿಪೂರ್ಣವೂ, ಕುತೂಹಲಕಾರಿಯೂ ಆಗುವಂತೆ ಮಾಡಿದ ನಮ್ಮೆಲ್ಲ ಅತಿಥಿಗಳಿಗೆ ಈ ಸಂಚಿಕೆಯನ್ನು ಸಮರ್ಪಿಸುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲ ಹೀಗೇ ಮುಂದುವರೆಯಲಿ ಕನ್ನಡದಲ್ಲಿ ಇನ್ನಷ್ಟು ಇಂತಹ ಪ್ರಯತ್ನಗಳಿಗೆ ಅದು ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇವೆ.

ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.

Recording date: 17 January 2021

Credits: Music: Crescents by Ketsa Licensed under creative commons. Icon made by Freepik from www.flaticon.com