ಐವತ್ತು ಅರವತ್ತರ ವಯಸ್ಸಿನ ಆಸುಪಾಸಿನಲ್ಲಿ ಮನುಷ್ಯರನ್ನು ಕಾಡುತ್ತಿದ್ದವು ಮಧುಮೇಹ, ರಕ್ತದೊತ್ತಡ ಮೊದಲಾದ ಜೀವನಶೈಲಿ ಸಂಬಂಧಿತ ಖಾಯಿಲೆಗಳು ಈಗೀಗ ಮುವತ್ತು ನಲವತ್ತರ ವಯಸ್ಕರನ್ನೇ ನಲುಗಿಸುತ್ತಿವೆ. ದೈಹಿಕ ಶ್ರಮದಿಂದ ದೂರದವಾದ ಆಧುನಿಕ ಜೀವನಶೈಲಿಯಿಂದಾಗಿ ಈ ರೋಗಗಳಷ್ಟೇ ಅಲ್ಲದೆ ಕೀಲು ಸವೆತ, ಬೆನ್ನು, ಭುಜ, ಮೊಣಕೈ ನೋವು ಹೀಗೆ ಹಲವು ವಿಧದ ನೋವುಗಳು ಇಪ್ಪತ್ತರ ಹರೆಯದವರಲ್ಲೂ ಸಾಮಾನ್ಯವಾಗುತ್ತಿವೆ.
ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನಲ್ಲೂ ಏಕೆ ಅವಶ್ಯಕ? ಇದಕ್ಕೆ ಜಿಮ್ ಸೇರುವುದೊಂದೇ ಉಪಾಯವೇ? ಕೇವಲ ವಾಕ್ ಮಾಡುವುದರಿಂದ ಏನೂ ಉಪಯೋಗವಿಲ್ಲವೇ? ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಅತಿ ಸುಲಭವಾದ ಹಾಗೂ ಆಪ್ಯಾಯಮಾನವಾದ ಪರಿಹಾರ ದೀರ್ಘವಾದ ರಾತ್ರಿಯ ಸವಿನಿದ್ದೆ ಎನ್ನುವುದು ನಿಮಗೆ ತಿಳಿದಿದೆಯೇ?
ಅರಳಿಕಟ್ಟೆಯ ಐವತ್ತೆರಡನೆಯ ಸಂಚಿಕೆಯಲ್ಲಿ ನಾವು ದಿಲ್ಲಿ ಡೇರ್ ಡೆವಿಲ್ ಐಪಿಎಲ್ ತಂಡ ಸೇರಿದಂತ ಅನೇಕ ವೃತ್ತಿಪರ ಕ್ರೀಡಾಪಟುಗಳ ಫಿಟ್ ನೆಸ್ ತರಬೇತುದಾರರಾಗಿ ಕೆಲಸ ಮಾಡಿರುವ ಕನ್ನಡಿಗ ಜೀತ್ ದೇವಯ್ಯರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೀತ್ ದೇವಯ್ಯ, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 7 February 2021
Credits: Music: Crescents by Ketsa Licensed under creative commons. Icon made by Freepik from www.flaticon.com