Listen

Description

ಕನ್ನಡಿಗರು ತಮ್ಮ ವಿಶಿಷ್ಟ ತಿನಿಸುಗಳ ಬಗ್ಗೆ ಕೊಚ್ಚಿಕೊಳ್ಳಲು ಯಾಕೆ ಹಿಂದುಮುಂದು ನೋಡುತ್ತಾರೆ? ರೆಡಿ ಟು ಈಟ್ ಮತ್ತು ರೆಡಿ ಟು ಕುಕ್ ನಡುವೆ ಇರುವ ವ್ಯತ್ಯಾಸ ಏನು? ಫುಡ್ ಸಂಬಂಧೀ ಕಂಪನಿ ಶುರು ಮಾಡುವ ವಿಧಿವಿಧಾನ ಏನು, ಅದಕ್ಕೆ ಲೈಸೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ಏನು, ಅದರಲ್ಲಿರುವ ಛಾಲೆಂಜುಗಳು ಯಾವುವು?

ಕೆಲವರಿಗೆ ಖಾರ ಜಾಸ್ತಿ ಇಷ್ಟ ಕೆಲವರಿಗೆ ಎಣ್ಣೆ ಕಮ್ಮಿ ಹೀಗೆ ಒಬ್ಬೊಬ್ಬರ ರುಚಿಯೂ ಬೇರೆಯಾಗಿರುವಾಗ ಬಹುತೇಕ ಎಲ್ಲರಿಗೂ ಸರಿಹೋಗುವಂತೆ ಒಂದು ಐಟಂ ಮಾಡುವುದು ಹೇಗೆ? ರೆಡಿ ಅಡಿಗೆ ಪದಾರ್ಥದಲ್ಲಿ ಬಳಸುವ ಸಾವಿರಾರು ಪ್ರಿಸರ್ವೇಟಿವ್ಸ್ ಯಾವ್ಯಾವ ಕಾರಣಕ್ಕೆ ಹಾಕುತ್ತಾರೆ, ಪ್ಯಾಕೆಟ್ ಹಿಂದೆ ಹಾಕಿರುವ ಮಾಹಿತಿಯಿಂದ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಹೇಗೆ ತಿಳಿದುಕೊಳ್ಳುವುದು? ತಮ್ಮದೇ ಒಂದು ಫುಡ್ ಸಂಬಂಧೀ ಕಂಪನಿ ಶುರುಮಾಡುವವರಿಗೆ ಕೊಡುವ ಸಲಹೆ ಸೂಚನೆಗಳು ಏನು?

ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಐಪಾಕ ಓನರ್ ಬಿಂದು ಸುಶೀಲ್ ಜೊತೆ ಒಂದು ವಿಶೇಷ ಮಾತುಕತೆ ಅರಳಿಕಟ್ಟೆಯ ಐವತ್ಮೂರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ!

ಚರ್ಚೆಯಲ್ಲಿ ಭಾಗವಹಿಸಿದವರು ಬಿಂದು ಸುಶೀಲ್, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.

Recording date: 27 February 2021

Credits: Music: Crescents by Ketsa Licensed under creative commons. Icon made by Freepik from www.flaticon.com