ನಮ್ಮಲ್ಲಿ ಬಹುತೇಕರಿಗೆ ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ಪೊಲೀಸರು ಹೇಗೆ ಕ್ರೈಂ ಪತ್ತೆ ಹಚ್ಚುತ್ತಾರೆ ಎನ್ನುವುದಕ್ಕೆ ಸಿನಿಮಾ, ಕಾದಂಬರಿಗಳು ಕಟ್ಟಿಕೊಡುವ ಚಿತ್ರಣಗಳಷ್ಟೇ ತಿಳಿದಿರುತ್ತವೆ. ಈ ಚಿತ್ರಣಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆಯೇ?
ಪೊಲೀಸರಿಗೆ ತಮ್ಮ ಕೆಲಸ ನಿರ್ವಹಣೆಯಲ್ಲಿರುವ ಒತ್ತಡಗಳು ಯಾವುವು? ಪೊಲೀಸ್ ಪರಿಭಾಷೆಯಲ್ಲಿ ಚಪಾತಿ ಒತ್ತಿಸುವುದು, ಹಗ್ಗ ಹಾಕುವುದು, ಏರೋಪ್ಲೇನ್ ಹತ್ತಿಸುವುದು ಅಂದರೇನು? ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರು "ನಮಗೆ ಕರೆಂಟ್ ಮಾಡ್ಸಿ ಸಾರ್" ಎಂದು ಪೊಲೀಸರನ್ನು ಗೋಗರೆಯುವುದು ಏಕೆ?
ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಸೇವೆಗೆ ಸೇರಿದ ಮೂರೇ ವರ್ಷಗಳಲ್ಲಿ ಹದಿಮೂರು ಬಾರಿ ಎತ್ತಂಗಡಿಗೊಂಡ (ಅವರದೇ ಭಾಷೆಯಲ್ಲಿ ಹೇಳುವುದಾದರೆ "unceremoniously kicked out") ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿಯವರ ಜತೆಗೆ ಚರ್ಚಿಸಿದ್ದೇವೆ.
ಮೈಸೂರಿನ ಕುಖ್ಯಾತ ರೌಡಿ ಮರ್ಡರ್ ರಿಯಾಜನ ಪೈಜಾಮದಲ್ಲಿ ಹಾವು ಬಿಟ್ಟು ಕೇಸಿಗೆ ಬೇಕಾದ ಮಾಹಿತಿಯನ್ನು ಬಾಯಿ ಬಿಡಿಸಿದ್ದು, ಹೈದರಾಬಾದಿನಲ್ಲಿ ವಿಸಿ ಸಜ್ಜನರ್ ಎಂಬ ಪೊಲೀಸ್ ಅಧಿಕಾರಿ ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಕೊಂದಿದ್ದು, ಪೊಲೀಸರು ಮಾಹಿತಿ ಕಲೆಹಾಕಲು ಬಳಸುವ ಮಾರ್ಗಗಳು ಹೀಗೆ ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಐವತ್ತೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.
Recording date: 7 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Hyderabad case: Police kill suspects in rape and murder of Indian vet - https://www.bbc.com/news/world-asia-india-50682262
- Julio Ribeiro - https://en.wikipedia.org/wiki/Julio_Ribeiro_(police_officer)
- Polygraph test - https://indianexpress.com/article/explained/explained-polygraph-narco-analysis-lie-detector-test-5926426/