ಪ್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆಯ ಎರಡನೆಯ ಭಾಗ ಅರಳಿಕಟ್ಟೆಯ ಅರವತ್ತನೆಯ ಸಂಚಿಕೆಯಲ್ಲಿ...
ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ.
ನಮ್ಮೆಲ್ಲರ ಜಾಣ್ಮೆಗಿಂತ ಹಿರಿದಾದ ಜಾಣ್ಮೆಯೊಂದಿದೆ. ಇದನ್ನು ತಲೆಬ್ ಲಿಂಡಿ ಪರಿಣಾಮ ಎಂದು ಗುರುತಿಸುತ್ತಾರೆ. ಇದು ನಮ್ಮ ದಿನನಿತ್ಯದ ಆಯ್ಕೆಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ? ವಾದದಲ್ಲಿ ಗೆಲ್ಲುವುದಕ್ಕೂ, ಗೆಲ್ಲುವುದಕ್ಕೂ ಇರುವ ವ್ಯತ್ಯಾಸವೇನು? ಸಾಮಾಜಿಕ ತಾಣಗಳಲ್ಲಿ ನಡೆಯುವ ವಾಕ್ ಸಮರ ಮುಖತಃ ಭೇಟಿಗಳಲ್ಲಿ ನಡೆಯುವುದು ಅತಿ ವಿರಳವೇಕೆ?
ಬರಾಕ್ ಒಬಾಮರ "ಲಂಚಕೋರ"ತನದ ಬಗ್ಗೆ ನಿಮಗೆ ತಿಳಿದಿದೆಯೇ? ವಿಚಾರವಾದ, ಧಾರ್ಮಿಕತೆ ಹಾಗೂ ಮೂಢನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವುವುದು ಎಲ್ಲಿ? ಇನ್ನಷ್ಟು ಆಸಕ್ತಿಕರ ವಿಷಯಗಳ ಚರ್ಚೆ ಈ ಸಂಚಿಕೆಯಲ್ಲಿ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.
ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.
Recording date: 11 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Sebi regulation skin in the game - https://www.newindianexpress.com/business/2021/may/03/the-optics-intent-and-impact-ofskin-in-the-game-2297767.html
- Link to Aralikatte episode on Mental models: https://youtu.be/C8FfMHzJ2ro
- Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.