ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.
ಮೊದಲ ಭಾಗದಲ್ಲಿ ನಾವು ವೈದ್ಯರಾಗಿ ತರಬೇತಿ ಪಡೆಯುವಾಗಿನ ಡಾ ಶಾಂತಲಾರ ಅನುಭವ, ಜನರಲ್ ಸರ್ಜರಿಯಲ್ಲಿ ಆಸಕ್ತಿ ಇದ್ದರೂ ವೈದ್ಯಕೀಯ ವ್ಯವಸ್ಥೆಯಲ್ಲಿನ ಪಕ್ಷಪಾತಿ ಧೋರಣೆಯಿಂದಾಗಿ ಅದು ಕೈತಪ್ಪಿದ್ದು, ದೆಹಲಿಯ ಆಸ್ಪತ್ರ್ಯೆಯಲ್ಲಿ "ಮದರಾಸಿ" ಎಂಬ ಮೂದಲಿಕೆಯನ್ನು ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದು ಹೀಗೆ ಮಹಿಳೆಯಾಗಿ ವೈದ್ಯಕೀಯ ವೃತ್ತಿಯಲ್ಲಿ ನೆಲೆನಿಲ್ಲುವಲ್ಲಿ ಎದುರಿಸಿದ ಸವಾಲುಗಳನ್ನು ಚರ್ಚಿಸಿದ್ದೇವೆ.
"ಮನಸ್ಸು ತಿಳಿಯದ್ದನ್ನು ಕಣ್ಣು ಕಾಣದು" (Eyes don't see what the mind doesn't know) ಎನ್ನುವ ವಿವೇಕವಾಣಿ ವೈದ್ಯ ವೃತ್ತಿಯಲ್ಲಿ ಹೇಗೆ ಅನ್ವಯವಾಗುತ್ತದೆ? ವೃತ್ತಿಯಲ್ಲಿ ಕಲಿತ ಶಿಸ್ತು ದಿನನಿತ್ಯದ ಜೀವನದಲ್ಲಿ ಹೇಗೆ ಬಳಕೆಗೆ ಬರುತ್ತದೆ? ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಬದಲಾವಣೆಗಳೇನು? - ಹೀಗೆ ಅನೇಕ ಕುತೂಹಲಕಾರಿ ವಿಷಯಗಳ ಕುರಿತ ಚರ್ಚೆ ಅರಳಿಕಟ್ಟೆಯ ಅರವತ್ತೊಂದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.
Recording date: 18 April 2021
Credits: Music: Crescents by Ketsa Licensed under creative commons. Icon made by Freepik from www.flaticon.com