Listen

Description

ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

ಎರಡನೆಯ ಸಂಚಿಕೆಯಲ್ಲಿ ನಾವು ಶಾಂತಲಾರ ೩೦೧೯ ಎಡಿ ಎನ್ನುವ ಸೈನ್ಸ್ ಫಿಕ್ಷನ್ ಪುಸ್ತಕದ ಕುರಿತ ಚರ್ಚೆಯಿಂದ ತೊಡಗಿ ಭಾರತದ ಪುರಾಣ ಕಥೆಗಳಿಗೂ, ಆಧುನಿಕ ವಿಜ್ಞಾನಕ್ಕೂ ಇರುವ ನಂಟು, ನಮ್ಮ ಭೌತಿಕ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ಮನುಷ್ಯರಿಗೆ ಇರುವ ಮಿತಿ, ಸೈನ್ಸ್ ಫಿಕ್ಷನಿಗೂ ಕಾವ್ಯಕ್ಕೂ ಇರುವ ಸಾಮ್ಯ, ವೈದ್ಯಕೀಯ ವೃತ್ತಿ, ಕುಟುಂಬ ನಿರ್ವಹಣೆ, ಬರವಣಿಗೆ, ಜತೆಗೆ ಚಿತ್ರಕಲೆ - ಇವೆಲ್ಲಕ್ಕೂ ಹೇಗೆ ಸಮಯ ಹೊಂದಿಸಿಕೊಳ್ಳುವುದು -  ಹೀಗೆ ಹಲವು ಕುತೂಹಲಕಾರಿ ವಿಷಯಗಳ ಚರ್ಚೆ ಅರಳಿಕಟ್ಟೆಯ ಅರವತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.

Recording date: 18 April 2021

Credits: Music: Crescents by Ketsa Licensed under creative commons. Icon made by Freepik from www.flaticon.com

Show Notes



- Dr. Shantala's book 3019 AD - https://mylang.in/products/3019ad-inr

- Episode sponsored by MyLang Books : https://mylang.in/

Use exclusive promo code AK20 to get flat 20% off on your first purchase.

Use exclusive promo code AK10 to get flat 10% off on every purchase.