Listen

Description

ನಮ್ಮ ಮನೆ, ಸೈಟು, ಕಾರು, ಬಳೆ, ಸರ, ಕಾಲುಂಗುರ ಹೀಗೆ ಭೌತಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳಂತೆಯೇ ಬೌದ್ದಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಪೇಟೆಂಟ್, ಕಾಪಿ ರೈಟ್, ಟ್ರೇಡ್ ಮಾರ್ಕ್, ಡಿಸೈನ್ ರಕ್ಷಣೆ, ವ್ಯಾಪಾರ ರಹಸ್ಯ (ಟ್ರೇಡ್ ಸೀಕ್ರೇಟ್) ಹೀಗೆ ನಾನಾ ಬಗೆಯ ರಕ್ಷಣೆಗಳನ್ನು ವಿವಿಧ ರಾಷ್ಟ್ರಗಳ ಕಾನೂನುಗಳು ಒದಗಿಸುತ್ತವೆ ಎನ್ನುವುದು ನಿಮಗೆ ಗೊತ್ತೆ?

ಯುರೋಪಿನಲ್ಲಿ ಪ್ರಭಾವಶಾಲಿಯಾಗಿರುವ ಪ್ರೈವೆಸಿ ಹಕ್ಕುಗಳ ಬಗೆಗಿನ ಅರಿವು ನಮ್ಮ ದೇಶದಲ್ಲಿ ದುರ್ಬಲವಾಗಿರುವುದು ಏಕೆ? ಈ ದೌರ್ಬಲ್ಯಕ್ಕೆ ನಮ್ಮ ಸಂಸ್ಕೃತಿ, ಭಾಷೆಯೇ ಹೇಗೆ ಇಂಬು ನೀಡುತ್ತವೆ?  ದಾಂಪತ್ಯದಲ್ಲಿನ ಅತ್ಯಾಚಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸುವುದಕ್ಕೆ ಅಡ್ಡಿಯಾಗಿ ಮುಂದೊತ್ತುವ ದಾಂಪತ್ಯದ ಖಾಸಗಿತನದ ಹಕ್ಕು, ವಿವಾಹ ಬಾಹಿರ ಸಂಬಂಧವನ್ನು ಕಾನೂನು ಬಾಹಿರವಾಗಿಸುವಾಗ ನಮಗೇಕೆ ನೆನಪಾಗುವುದಿಲ್ಲ? ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಖಾಸಗಿ ಹಕ್ಕುಗಳ ಚರ್ಚೆಯ ದಾರಿ ತಪ್ಪಿಸುವ ಇನ್ನಷ್ಟು ನಿದರ್ಶನಗಳ ಬಗ್ಗೆ ತಿಳಿಯಬೇಕೆ?

ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರತ್ಮೂರನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.

Recording date: 25 April 2021

Credits: Music: Crescents by Ketsa Licensed under creative commons. Icon made by Freepik from www.flaticon.com

Show notes

- Puttaswamy vs union of India judgement - https://indiankanoon.org/doc/127517806/

- Article 14 of Indian constitution - https://en.wikipedia.org/wiki/Article_14_of_the_Constitution_of_India

- Article 19 of Indian constitution - https://en.wikipedia.org/wiki/Freedom_of_expression_in_India

- Article 21 of Indian constitution - https://www.constitutionofindia.net/constitution_of_india/fundamental_rights/articles/Article%2021

- Jay Shaw defamation case against The Wire - https://thewire.in/media/the-wire-withdraws-its-sc-petitions-will-see-jay-amit-shah-in-trial-court-now