ಕೆಲವು ಪ್ರಶ್ನೆಗಳಿಗೆ ಕಾನೂನಿನಲ್ಲಿ ಉತ್ತರ ಹುಡುಕುವುದು ತಪ್ಪು, ಬದಲಾಗಿ ರಾಜಕೀಯವನ್ನು ನೆಚ್ಚಬೇಕು. ಆದರೆ ನಮ್ಮ ದೇಶದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿಯೊಂದಕ್ಕೂ ನ್ಯಾಯಾಂಗದ ಮೊರೆಹೋಗುತ್ತಾರೆ. ಇದರಿಂದಾಗಿ ನ್ಯಾಯಾಲಯಗಳ ಎದುರು ಇರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಇರುವ ಉಪಾಯಗಳೇನು?
ತ್ರಿವಳಿ ತಲಾಕ್, ರಾಮ ಮಂದಿರ ನಿರ್ಮಾಣದ ವಿವಾದ, ಶಬರಿಮಲೈ ದೇವಾಲಯ ಪ್ರವೇಶದ ವಿವಾದ ಇವುಗಳಲೆಲ್ಲ ಜನ ಸಮಾನ್ಯರು ಕಾಣದ ಕಾನೂನು, ರಾಜಕೀಯ, ಸಾಂಸ್ಕೃತಿಕ ಅಂಶಗಳ ಪ್ರಭಾವ, ದೇಶದಲ್ಲಿ ನಮ್ಮ ಸರ್ಕಾರವೇ ಅತಿದೊಡ್ಡ ದಾವೆದಾರನಾಗಿರುವ ವಿಪರ್ಯಾಸ.
ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರವತ್ನಾಲ್ಕನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.
Recording date: 25 April 2021
Credits: Music: Crescents by Ketsa Licensed under creative commons. Icon made by Freepik from www.flaticon.com