ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ.
ಜಂಗಲ್ ಬುಕ್, ಲಯನ್ ಕಿಂಗ್, ಲೈಫ್ ಆಫ್ ಪೈ, ಶೇಪ್ ಆಫ್ ವಾಟರ್, ೧೯೧೭ ಈ ಎಲ್ಲಾ ಚಿತ್ರಗಳಿಗೆ ಇರುವ ಸಾಮ್ಯತೆಯೇನು? ಈ ಚಿತ್ರಗಳಲ್ಲಿ ಬಳಕೆಯಾಗಿರುವ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಶನ್ ಕೆಲಸ ನಡೆದಿದ್ದು ಕರ್ನಾಟಕದಲ್ಲಿ. ದೇಶದಲ್ಲೇ ಮೊಟ್ಟ ಮೊದಲ ಅನಿಮೇಶನ್ ಹಾಗೂ ಗ್ರಾಫಿಕ್ಸ್ ಕುರಿತ ಯೋಜನೆ ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ಐಟಿ ಬಿಟಿ ಕ್ಷೇತ್ರದ ನೆರಳಲ್ಲೇ ಬೆಳೆದ ಅನಿಮೇಶನ್ ತನ್ನದೇ ರೆಕ್ಕೆಗಳನ್ನು ಚಾಚಿ ಹಾರುವ ಹೊಸ್ತಿಲಲ್ಲಿ ಇರುವ ಉದ್ಯಮ. ಇದು ಬೆಳೆದು ಬಂದ ದಾರಿ ಯಾವುದು? ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವವರು ಹೇಗೆ ತೊಡಗಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರಗಳು ಈ ವಾರದ ಸಂಚಿಕೆಯಲ್ಲಿವೆ.
ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್.
Recording date: 19 June 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Bhimsain Khurana - https://www.dsource.in/course/story-indian-animation/video/bhimsain-khurana
- Ram Mohan - https://www.dsource.in/course/story-indian-animation/video/ram-mohan
- Cricket flip book - https://www.youtube.com/watch?v=vBxFBgZy8OA
- Infobells Govina Haadu - https://www.youtube.com/watch?v=Lix-XLkFuvE
- ABAI - https://twitter.com/abai_avgc
- AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece