Listen

Description

ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು.

ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು?

ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ನಿಮ್ಮ ಮುಂದಿದೆ.

Recording date: 2 May 2021

Credits: Music: Crescents by Ketsa Licensed under creative commons. Icon made by Freepik from www.flaticon.com

Show notes

- TV Anchors musing what is the internet, anyway: https://www.youtube.com/watch?v=UlJku_CSyNg

- Bitcoin white paper: https://bitcoin.org/bitcoin.pdf