Listen

Description

ಮಾನಸಿಕ ರೋಗ ಅನ್ನುವುದರ ಬಗ್ಗೆ ಎಷ್ಟೋ ತಪ್ಪು ಕಲ್ಪನೆಗಳು ಇವತ್ತಿಗೂ ಇದೆ. ಅದರ ಜೊತೆಗೆ ಅದರ ಬಗ್ಗೆ ಮುಕ್ತವಾಗಿ ಮಾತಾಡೋ ವಾತಾವರಣ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿ ಇಲ್ಲ. ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಇದರ ಬಗೆಗಿನ ಒಳನೋಟಗಳು ಬಹಳ ಮುಖ್ಯವಾಗುತ್ತದೆ. ಮಾನಸಿಕ ರೋಗ ಎಲ್ಲರಿಗೂ ಬರಬಹುದಾ? ಅಥವಾ 'ದುರ್ಬಲರು' ಅನ್ನಿಸಿಕೊಂಡವರಿಗೆ ಮಾತ್ರ ಬರುವುದಾ? ಇದು 'ಬೇಡದೆ ಇರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ' ಒಂದು ದುರಭ್ಯಾಸವಾ? ಅಥವಾ ನಮ್ಮ ನಿಯಂತ್ರಣಕ್ಕೂ ಮೀರಿದ ಜೀನ್ಸ್ ಕೈವಾಡವಿದೆಯಾ? ಇನ್ನೂ ಹತ್ತು ಹಲವಾರು ಆಯಾಮಗಳ ಬಗ್ಗೆ ಒಂದು ಮುಕ್ತ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!

ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಚರ್ಚೆಯ ಮೊದಲ ಭಾಗ ಎಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

Recording date:  04 July 2021

Credits: Music: Crescents by Ketsa Licensed under creative commons. Icon made by Freepik from www.flaticon.com