ದೇಹ ಆರೋಗ್ಯ ತಪ್ಪಿದಂತೆಯೇ ಮನಸ್ಸಿನ ಆರೋಗ್ಯವೂ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಮಾನಸಿಕ ರೋಗದ ಕುರಿತು ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳು ಇಂದಿಗೂ ಇವೆ.
ಈ ಪೀಳಿಗೆಯ ಮಕ್ಕಳಲ್ಲಿ ಏಕಾಂಗಿತನ ಹೆಚ್ಚು ಕಾಡುತ್ತದೆಯೇ? ಆತ್ಮಹತ್ಯೆ ಪ್ರಯತ್ನಗಳು ಗಂಡಸರಲ್ಲೇ ಹೆಚ್ಚು ಏಕೆ? ಮಾನಸಿಕ ಆರೋಗ್ಯದ ಕುರಿತು ನೆರವು ಅರಸುವುದರಲ್ಲಿ ಪುರುಷರಿಗೆ ಇರುವ ಅಡೆತಡೆಗಳೇನು? ಸ್ಕಿಜೊಫ್ರೇನಿಯ ಅಂದರೇನು? ಸೋಶಿಯಲ್ ಮೀಡಿಯಾ ವ್ಯಸನದಿಂದ ಮಾನಸಿಕ ಸ್ವಾಸ್ಥ್ಯದ ಮೇಲೆ ಉಂಟಾಗುವ ಪರಿಣಾಮವೇನು? ಇನ್ನೂ ಹಲವು ಆಸಕ್ತಿದಾಯಕ ಹಾಗೂ ಮಾಹಿತಿ ಪೂರ್ಣ ವಿಷಯಗಳ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಚರ್ಚೆಯ ಎರಡನೆಯ ಭಾಗ ಎಪ್ಪತ್ತೆರಡನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 04 July 2021
Credits: Music: Crescents by Ketsa Licensed under creative commons. Icon made by Freepik from www.flaticon.com