ಅಲೆಮಾರಿ ಮನುಷ್ಯ ಒಂದೆಡೆ ನೆಲೆನಿಂತು ತನ್ನ ಸುತ್ತಮುತ್ತಲ ಪರಿಸರವನ್ನು ಪಳಗಿಸಿ ತನಗೆ ಬೇಕಾದ ಆಹಾರ ಬೆಳೆಯಲು ಶುರುಮಾಡಿದಾಗಲೇ ವಿಜ್ಞಾನಿಯಾದ. ವೈವಿಧ್ಯಮಯವಾದ ಸಸ್ಯಗಳಲ್ಲಿ ತನಗೆ ಅಗತ್ಯವಾದ ಗುಣಗಳುಳ್ಳ ಸಸ್ಯಗಳನ್ನು ತಳಿ ಮಾಡುವ ವಿದ್ಯೆಯನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಿಕೊಂಡು ಬಂದ. ಈ ವಿದ್ಯೆಯ ಹಿಂದಿರುವ ತತ್ವವನ್ನು ಅರಿಯುವುದಕ್ಕೆ ನಾವು ಹದಿನೆಂಟನೆಯ ಶತಮಾನದವರೆಗೂ ಕಾಯಬೇಕಾಯ್ತು.
ತಳಿ, ಕುಲಾಂತರಿ ಸಸ್ಯಗಳಿಂದ ಮನುಕುಲಕ್ಕೆ ಒದಗುವ ಅನುಕೂಲಗಳೇನು? ಕುಲಾಂತರಿ ಬೆಳೆಗಳ ವಿರುದ್ಧದ ವಾದಗಳು, ಸಾವಯವ ಕೃಷಿಯ ಪ್ರತಿಪಾದನೆ ಕೋಟ್ಯಂತರ ಜನರ ಆಹಾರ ಭದ್ರತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಕೋವಿಡ್ ವೈರಾಣುವನ್ನು ಪತ್ತೆ ಹಚ್ಚುವ ಪಿಸಿಆರ್ ಪರೀಕ್ಷೆಗೂ ಉಪ್ಪಿಟ್ಟಿನಲ್ಲಿ ಹಾಕಿದ ಟೊಮೆಟೋ ರುಚಿಗೂ ಏನು ಸಂಬಂಧ? - ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್.ಕೆ.ವಿ ಯವರೊಂದಿಗೆ ಚರ್ಚಿಸಿದ್ದೇವೆ.
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಅರಳಿಕಟ್ಟೆಯಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 08 August 2021
Credits: Music: Crescents by Ketsa Licensed under creative commons. Icon made by Freepik from www.flaticon.com