ಮೊಬೈಲ್ ಕೊಳ್ಳಲು ಗ್ರಾಹಕರಾದ ನಮಗೆ ಅನೇಕ ಆಯ್ಕೆಗಳಿವೆ. ದೇಶಭಕ್ತರು ಸ್ವದೇಶಿ ಕಂಪೆನಿಗಳ ಮೊಬೈಲ್ ಖರೀದಿಸಬಹುದು, ಪ್ರೈವೆಸಿ ಮುಖ್ಯವಾದವರು ಐಫೋನ್ ಕೊಳ್ಳಬಹುದು, ಕಡಿಮೆ ಬೆಲೆಯಲ್ಲಿ ಉತ್ತಮವಾದ ಫೋನ್ ಬೇಕಾದವರು ಆಂಡ್ರಾಯ್ಡ್ ಫೋನ್ ಕೊಳ್ಳಬಹುದು, ಬರೀ ಕರೆಗಳಿಗಾಗಿ ಫೋನ್ ಬಳಸುವವರು ಫೀಚರ್ ಫೋನ್ ಕೊಳ್ಳಬಹುದು. ಇದೇ ಆಯ್ಕೆಯನ್ನು ರೈತರು ತಮ್ಮ ಬೀಜಗಳನ್ನು ಕೊಳ್ಳಲು ಏಕೆ ನಿರಾಕರಿಸಬೇಕು?
ಸಾವಯವ ಕೃಷಿಯ ಇಳುವರಿಯಿಂದ ಇಡೀ ದೇಶದ ಹಸಿವು ನೀಗಿಸಲು ಸಾಧ್ಯವಾಗುತ್ತದೆ ಎಂದಾದರೆ ಆಧುನಿಕ ಕೃಷಿ ಪದ್ಧತಿ ಜಾರಿಗೆ ತರುವ ಮುನ್ನ ದೇಶದಲ್ಲಿ ಅಪೌಷ್ಟಿಕತೆ, ಹಸಿವು ಏಕೆ ಸರ್ವವ್ಯಾಪಿಯಾಗಿತ್ತು? ಏರುತ್ತಿರುವ ಜನಸಂಖ್ಯೆ ಹಾಗೂ ಇಳಿಯುತ್ತಿರುವ ಕೃಷಿ ಭೂಮಿಯ ಗಾತ್ರಗಳಿಂದ ಸಾವಯವ ಕೃಷಿ ಎಷ್ಟರ ಮಟ್ಟಿಗೆ ಪ್ರಾಯೋಗಿಕ?
ಮಾವು, ಸೀತಾಫಲ, ಸೇಬು, ಕಿತ್ತಳೆ, ಟೊಮೆಟೋ ಇವೆಲ್ಲ ದಿನೇದಿನೇ ಗಾತ್ರದಲ್ಲಿ ಹಿಗ್ಗುತ್ತಿದ್ದರೆ ಕುಂಬಳ ಕಾಯಿ, ಕಲ್ಲಂಗಡಿಗಳು ಗಾತ್ರದಲ್ಲಿ ಕುಗ್ಗುತ್ತಿರುವುದರ ಹಿಂದಿರುವ ಮರ್ಮವೇನು?
ಹೊಸ ತಂತ್ರಜ್ಞಾನ, ವಿಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಅಪನಂಬಿಕೆ ಹಾಗೂ ಭಯವನ್ನು ನಿವಾರಿಸುವಲ್ಲಿ ಮಾಧ್ಯಮ, ವಿಜ್ಞಾನಿ ಹಾಗೂ ತಜ್ಞರ ಜವಾಬ್ದಾರಿ ಏನು? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್ ಕೆ.ವಿಯವರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಎಪ್ಪತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 08 August 2021
Credits: Music: Crescents by Ketsa Licensed under creative commons. Icon made by Freepik from www.flaticon.com