Listen

Description

ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ?

ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ?

ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.

ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.

ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.

Recording date:  19 September 2021

Credits: Music: Crescents by Ketsa Licensed under creative commons. Icon made by Freepik from www.flaticon.com

Show Notes

- Episode sponsored by MyLang Books : https://mylang.in/

Use exclusive promo code AK20 to get flat 20% off on your first purchase.

Use exclusive promo code AK10 to get flat 10% off on every purchase.