Listen

Description

ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ.

ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ.

ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

ಮೊದಲ ಭಾಗ ಎಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

Recording date:  23 October 2021

Credits: Music: Crescents by Ketsa Licensed under creative commons. Icon made by Freepik from www.flaticon.com