Listen

Description

ಸಂಸ್ಥೆಯೊಂದರಲ್ಲಿ ಎಚ್ ಆರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳು ಮಾಡುವ ಕೆಲಸವೇನು? ಸಂಸ್ಥೆಗಳಲ್ಲಿ ಈ ಹುದ್ದೆಯ ಅಗತ್ಯ ಯಾವಾಗಿನಿಂದ ಶುರುವಾಯಿತು? ರಂಗೋಲಿ ಸ್ಪರ್ಧೆ, ಎಥ್ನಿಕ್ ಡೇ, ಪಾರ್ಟಿಗಳನ್ನು ಆಯೋಜಿಸುವುದಷ್ಟೇ ಈ ವಿಭಾಗದ ಕೆಲಸವೇ?

ರಾಜ ಮಹಾರಾಜರು, ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಈಗಿನ ಗಿಗ್ ಎಕಾನಮಿಯ ಸಮಯದಲ್ಲಿ ಎಚ್ ಆರ್ ಹುದ್ದೆಯ ಜವಾಬ್ದಾರಿಗಳು ಹೇಗೆ ವಿಸ್ತರಿಸುತ್ತಾ, ವಿಕಸಿಸುತ್ತಾ ಬಂದಿವೆ? ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳು ಉದ್ದಿಮೆಗಳಲ್ಲಿ ತೊಡಗಲು ಏನು ತರಬೇತಿ ಪಡೆಯಬೇಕು? ಎಚ್ ಆರ್ ಗಮನ ಸೆಳೆಯುವಂತಹ ರೆಸ್ಯೂಮೆ ಹೇಗೆ ರೆಡಿ ಮಾಡಬೇಕು?

ಇವೇ ಮೊದಲಾದ ಉಪಯುಕ್ತ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ಕೃಪಾ ಎನ್ ಎಸ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಕೃಪಾ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಚರ್ಚೆಯ ಎರಡನೆಯ ಭಾಗ ಎಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

Recording date:  30 October 2021

Credits: Music: Crescents by Ketsa Licensed under creative commons. Icon made by Freepik from www.flaticon.com