Listen

Description

ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು?

ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ.

ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

Show notes

- ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ

- Episode Sponsor : Chewda coffee - order from +91-8073317932 - use promo code AK10 to claim 10% discount