ಅರಳಿಕಟ್ಟೆಯ ತೊಂಭತ್ತೊಂದನೆಯ ಸಂಚಿಕೆಯಲ್ಲಿ ಜೊತೆಯಾಗಿರುವವರು ಚಿದಾನಂದ ರಾಜಘಟ್ಟ. ಪತ್ರಕರ್ತರಾಗಿ ಕೆಲಸಮಾಡುತ್ತಿರುವ ಚಿದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯನ್ನು ಅಭ್ಯಸಿಸುವ "The Horse That Flew", ತಮ್ಮ ವಿಚ್ಛೇದಿತ ಪತ್ನಿ ಗೌರಿ ಲಂಕೇಶ್ ಹತ್ಯೆಯ ನಂತರ ಬರೆದ "Illeberal India", ತಮಿಳು ನಾಡು ಮೂಲದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ "Kamala Harris: Phenomenal Woman" ಸೇರಿದಂತೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಕ್ರಿಕೆಟ್, ವಿದೇಶಾಂಗ ನೀತಿ , ದೇವಮಾನವರು ಹೀಗೆ ಹಲವಾರು ಆಸಕ್ತಿಯ ವಿಚಾರಗಳ ಕುರಿತು ಬರೆಯುತ್ತಾ ಬಂದಿದ್ದಾರೆ.
ಅರಳಿಕಟ್ಟೆಯ ಲೋಕಾಭಿರಾಮದ ಚರ್ಚೆಯ ಮೊದಲ ಭಾಗದಲ್ಲಿ ಚಿದು ತಮ್ಮ ಬಾಲ್ಯ, ಓದು, ಎಚ್ ನರಸಿಂಹಯ್ಯ ಹಾಗೂ ವಿಚಾರವಾದದ ಪ್ರಭಾವದ ಕುರಿತು ತೆರೆದು ಕೊಂಡಿದ್ದಾರೆ. ಪರಮಹಂಸ ಯೋಗಾನಂದ, ಸತ್ಯ ಸಾಯಿ ಬಾಬ, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ ಮೊದಲಾದ ದೇವ ಮಾನವರ ಲೋಕದ ಅವಲೋಕನ, ಭಾರತ ಸಾಫ್ಟವೇರ್ ರಫ್ತು ಮಾಡುವುದಕ್ಕೆ ಶುರು ಮಾಡುವ ಮೊದಲೇ ಜಗತ್ತಿಗೆ ಆಧ್ಯಾತ್ಮವನ್ನು ರಫ್ತು ಮಾಡಲು ಈ ದೇವಮಾನವರ "ಗ್ಲೋಬಲ್ ಅಪ್ರೋಚ್" ಎಷ್ಟರಮಟ್ಟಿಗೆ ಕಾರಣ? ಅಮೇರಿಕಾದ ಕಂಪೆನಿಗಳನ್ನು ನಿರ್ವಹಿಸಲು ಭಾರತೀಯ ಮೂಲ ಸಿಇಓಗಳು ನೇಮಿಸಲ್ಪಟ್ಟಾಗ ಭಾರತೀಯರು ಹಾಗೂ ಇಲ್ಲಿನ ಮಾಧ್ಯಮಗಳು ಸಂಭ್ರಮಿಸುತ್ತವೆ, ಆದರೆ ಅದರ ಜೊತೆಗೇ ಅಮೇರಿಕಾದಲ್ಲಿ ಅಸಹಾಯಕ ವೃದ್ಧರನ್ನು ಪೀಡಿಸಿ ದುಡ್ಡು ಕದಿಯುವ ಜಾಲದ ಮೂಲವೂ ಕೂಡ ಭಾರತವೇ ಆಗಿರುವುದನ್ನು ಭಾರತೀಯರು ಏಕೆ ಎಚ್ಚರದಿಂದ ಕಾಣುತ್ತಿಲ್ಲ? - ಹೀಗೆ ಹಲವು ಕುತೂಹಲ ಪ್ರಶ್ನೆಗಳನ್ನು ಬಳಸಿ ಹರಿಯುವ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.
Recording date: 18 December 2021
Credits: Music: Crescents by Ketsa Licensed under creative commons. Icon made by Freepik from www.flaticon.com
https://youtu.be/vessSrMIDfA