Listen

Description

ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ.

ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ.

ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

Recording date: 30 January 2022

Credits: Music: Crescents by Ketsa Licensed under creative commons. Icon made by Freepik from www.flaticon.com