S3 : EP - 59 :ಕೃಷ್ಣ ಸಂಧಾನ | Krishna Sandhana
ಹಿಂದೆ ನಿರ್ಧರಿಸಿದಂತೆ ಕೃಷ್ಣ ಹಸ್ತಿನಾಪುರಕ್ಕೆ ಬರುವ ಸನ್ನಿವೇಶ.. ಕೃಷ್ಣ ಸಂಧಾನಕ್ಕೆ ಹೊರಡುತ್ತೇನೆ ಅಂದಾಗ ದ್ರೌಪದಿಗೆ ದುಃಖ ಉಕ್ಕಿ ಉಕ್ಕಿ ಬಂತಂತೆ.. ಕಣ್ಣೀರು ಸುರಿಯುತ್ತಿದ್ದರೂ ಸಂಯಮದಿಂದ ಹೇಳ್ತಾಳೆ.. ' ಕೇಶವಾ ನಾನು ನಿನ್ನ ಪ್ರೀತಿಗೆ ಪಾತ್ರಳಾದ ಸಖಿ, ನಿನ್ನಲ್ಲಿರುವ ಸಲುಗೆಯಿಂದ ಹೇಳುತ್ತಿದ್ದೇನೆ.. ಪ್ರಸಿದ್ಧ ಪಾಂಚಾಲ ವಂಶದ ದ್ರುಪದ ಮಹಾರಾಜನ ಮಗಳಾದರೂ ಯಜ್ಞಕುಂಡದಿಂದ ಅಯೋನಿಜೆಯಾಗಿ ಜನಿಸಿದೆ ಆದರೆ ..ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com