ದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಂದೊಂದು ತುಕಡಿಗೆ ಒಬ್ಬೊಬ್ಬ ಸೇನಾ ನಾಯಕನನ್ನು ಆರಿಸಿ ಪಟ್ಟಕಟ್ಟಿದ. ನಂತರ .. ಅವರೆಲ್ಲರನ್ನು ಹಿಂದಿಟ್ಟುಕೊಂಡು ಭೀಷ್ಮರ ಬಳಿ ಹೋಗಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾ.. ಪಿತಾಮಹ, ಸೈನ್ಯ ಎಷ್ಟೇ ದೊಡ್ಡದಾಗಿರಲಿ ಸಮರ್ಥವಾಗಿರಲಿ ಅದಕ್ಕೆ ಯೋಗ್ಯನಾದ ನಾಯಕ ಇಲ್ಲದೆ ಹೋದರೆ ಅದರ ಸಾಮರ್ಥ್ಯ ವ್ಯರ್ಥವಾಗುತ್ತದೆ! ನೀವು ನೀತಿಯಲ್ಲಿ ಶುಕ್ರಾಚಾರ್ಯರಿಗೆ ಸಮ, ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ, ತೇಜಸ್ಸಿನಲ್ಲಿ ಸೂರ್ಯ ಸಮಾನ ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ.. ನೀವು ನಮ್ಮ ಸೇನಾ ನಾಯಕನಾಗಿ ನಮ್ಮನ್ನ ಸಂರಕ್ಷಿಸಬೇಕು ಅಂದಾಗ.. ಮುಂದೇನಾಯಿತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com